ಎಲ್‌ಡಿಎಫ್ ಮತ್ತು ಯುಡಿಎಫ್‌ಗೆ ಮತ ಚಲಾಯಿಸುವುದೆಂದರೆ ಅದು ಇಂಡಿಯಾ ಒಕ್ಕೂಟಕ್ಕೆ ಮತಚಲಾಯಿಸಿದಂತೆ -ಪ್ರಕಾಶ್ ಜಾವ್ದೇಕರ್

ಕಾಸರಗೋಡು: ಎಲ್‌ಡಿಎಫ್ ಮತ್ತು ಯುಡಿಎಫ್‌ಗೆ ಮತ ಚಲಾಯಿ ಸುವುದೆಂದರೆ ಅದು ಕೇಂದ್ರ ಮಟ್ಟದಲ್ಲಿ ವಿಪಕ್ಷಗಳ ಒಕ್ಕೂಟವಾದ ಇಂಡಿ ಯಾಕ್ಕೆ ಮತ ಚಲಾಯಿಸಿದಂತೆ ಎಂದೂ ಯಾಕೆಂದರೆ ಇಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ಪರಸ್ಪರ ಸ್ಪರ್ಧಿಸುವ ಈ ಎರಡೂ ಪಕ್ಷಗಳು    ಕೇಂದ್ರ ಮಟ್ಟದಲ್ಲಿ ಇಂಡಿಯಾ ಒಕ್ಕೂಟದ ಭಾಗವಾಗಿದೆ. ಆದ್ದರಿಂದ ಈ ಎರಡೂ ಪಕ್ಷಗಳು ಪರಸ್ಪರ ಸ್ಪರ್ಧಿಸುವುದರ ಔಚಿತ್ಯವಾದರೂ ಏನು ಎಂದು ಜಾವ್ದೇಕರ್  ಪ್ರಶ್ನಿಸಿದ್ದಾರೆ.

ಕಾಸರಗೋಡು ಪ್ರೆಸ್‌ಕ್ಲಬ್ ನೇತೃತ್ವದಲ್ಲಿ ನಡೆದ ಜನಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

ಸೌಲತ್ತುಗಳನ್ನು ವಿತರಿಸುವ ವಿಷಯದಲ್ಲಿ ಮೋದಿ ಸರಕಾರ ಯಾರಿಗೂ ಯಾವುದೇ ರೀತಿಯ ಪಕ್ಷಪಾತ ನೀತಿ ತೋರುತ್ತಿಲ್ಲ.  ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರ ಅಂತಹ ಪಕ್ಷಪಾತ ನೀತಿ ತೋರುತ್ತಿತ್ತು. ಅದಕ್ಕೆ ಭಿನ್ನವಾಗಿ ಮೋದಿ ಸರಕಾರ ಎಲ್ಲಾ ವಿಭಾಗದವರನ್ನು ಸಮಾನವಾಗಿ ಪರಿ ಗಣಿಸಿ ಯಾವುದೇ ರೀತಿಯ ಪಕ್ಷಪಾತ ನೀತಿ ತೋರದೆ ಎಲ್ಲಾ ಸವಲತ್ತುಗಳನ್ನು ಸಮಾನವಾಗಿ ವಿತರಿಸುತ್ತಿದೆ ಎಂದು ಅವರು ಹೇಳಿದರು.

೨೦೧೯ರ ಲೋಕಸಭಾ  ಚುನಾವಣೆಯಲ್ಲಿ ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿಯಾ ಗುವರು ಎಂಬ ನಿರೀಕ್ಷೆಯೊಂದಿಗೆ ಕೇರಳದ ಮತದಾರರು ಯುಡಿಎಫ್ ಪರ ಮತ ಚಲಾಯಿಸಿದ್ದರು. ಆದರೆ ಇಂದು ಕೇರಳದಲ್ಲಿ ರಾಜಕೀಯ ಸ್ಥಿತಿ ಬದಲಾಗಿದೆ. ಆದ್ದರಿಂದ ಕೇರಳದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಖಂಡಿತವಾಗಿಯೂ ಕೆಲವು ಸೀಟುಗಳನ್ನು ಗೆಲ್ಲಲಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಏರುತ್ತಾ ಸಾಗುತ್ತಿದೆ. ವಿದೇಶಗಳೂ ಭಾರತವನ್ನು ಹೊಗಳತೊಡಗಿದೆ. ಕೇಂದ್ರದಲ್ಲೂ ಈ ಚುನಾವಣೆಯಲ್ಲೂ ಮೋದಿ ನೇತೃತ್ವದ ಸರಕಾರ ಮೂರನೇ ಭಾರಿಗೆ ಅಧಿಕಾರಕ್ಕೇರಲಿದೆ ಎಂಬುವುದರಲ್ಲಿ ಯಾವುದೇ ಸಂದೇಹವಿಲ್ಲ. ೪೦೦ಕ್ಕೂ ಹೆಚ್ಚು ಸೀಟು ಎನ್‌ಡಿಎ ಪಡೆಯಲಿದೆ ಯೆಂದು ಅವರು ಹೇಳಿದರು.  ಈ ಕಾರ್ಯಕ್ರಮದಲ್ಲಿ  ಪ್ರೆಸ್ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಹಾಶಿಂ, ಎನ್‌ಡಿಎ ನೇತಾರರಾದ ರವೀಶತಂತ್ರಿ ಕುಂಟಾರು, ಕೆ. ರಂಜಿತ್, ಎ. ವೇಲಾಯುಧನ್, ವಿಜಯ್ ಕುಮಾರ್ ರೈ ಮೊದ ಲಾದವರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page