ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲೂ ಡಾಕ್ಟರ್‌ಗಳ ಸೇವೆ ಖಚಿತಪಡಿಸಬೇಕು-ಅಶ್ವಿನಿ ಎಂ.ಎಲ್
ಕಾಸರಗೋಡು: ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲೂ ಡಾಕ್ಟರ್‌ಗಳ ಸೇವೆಯನ್ನು ಖಚಿತಪಡಿಸಬೇಕೆಂದು, ನೇಮಕಾತಿ ಆದೇಶ ಲಭಿಸಿಯೂ ಕರ್ತವ್ಯಕ್ಕೆ ಪ್ರವೇಶಿಸಿದ ಡಾಕ್ಟರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರಕಾರ, ಆರೋಗ್ಯ ಇಲಾಖೆ ಸಿದ್ಧ ವಾಗಬೇಕೆಂದು ಮಹಿಳಾ ಮೋರ್ಛಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್ ಆಗ್ರಹಿಸಿದ್ದಾರೆ.
ಕುಂಬ್ಡಾಜೆ ಆರೋಗ್ಯ ಕೇಂದ್ರದ ಎರಡು ಡಾಕ್ಟರ್‌ಗಳನ್ನು ಬದಲಿ ನೇಮಕ ನಡೆಸದೆ ವರ್ಗಾವಣೆಗೊ ಳಿಸಿದುದರ ಹೊರತಾಗಿ ಕಾಸರ ಗೋಡು ಜನರಲ್ ಆಸ್ಪತ್ರೆಯ ತುರ್ತು ವಿಭಾಗ ಮೆಡಿಕಲ್ ಆಫೀಸರ್ ಸಹಿತವಿದ್ದವರನ್ನು ವರ್ಗಾಯಿಸಲಾಗಿದೆ. ಮೂರು ವರ್ಷಕ್ಕೆ ವರ್ಗಾವಣೆಯಿಲ್ಲ ಎಂಬ ಆರೋಗ್ಯ ಸಚಿವೆಯ ಭರವಸೆಯನ್ನು ಉಲ್ಲಂಘಿಸಲಾಗಿದೆ. ಈ ವರ್ಷ ನೇಮಕಾತಿ ಲಭಿಸಿದ 182 ಡಾಕ್ಟರ್‌ಗಳಲ್ಲಿ ಜಿಲ್ಲೆಯಲ್ಲಿ ಈಗ ಸೇವೆಯಲ್ಲಿರುವುದು ಕೇವಲ 17 ಮಂದಿ ಮಾತ್ರವಾಗಿದೆ. ಜಿಲ್ಲೆಯಲ್ಲಿ ನೇಮಕಾತಿ ಲಭಿಸುವವರು ರಜೆ ತೆಗೆದು ಅಥವಾ ಉನ್ನತ ಶಿಕ್ಷಣಕ್ಕೆ ತೆರಳುತ್ತಿರುವುದು ಕಂಡುಬರುತ್ತಿದೆ. ಜಿಲ್ಲೆಯು ಅಭಿವೃದ್ಧಿಯಲ್ಲಿ ಹಿಂದುಳಿಯಲು ರಾಜ್ಯದಲ್ಲಿ ಅದಲಿಬದಲಿ ಯಾಗಿ ಆಡಳಿತ ನಡೆಸಿದ ಒಕ್ಕೂಟಗಳು ಕಾರಣವಾಗಿವೆ ಯೆಂದು ಅಶ್ವಿನಿ ಆರೋಪಿಸಿದರು.