ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ ೪ರಿಂದ
ಕಾಸರಗೋಡು: ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾರ್ಚ್ ೪ರಂದು ಆರಂಭಗೊಂಡು ೨೬ರ ತನಕ ನಡೆಯಲಿದೆಯೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ. ಇದೇ ರೀತಿ ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿಯ ಪ್ರಥಮ ಮತ್ತು ದ್ವಿತೀಯ ವರ್ಷದ ಪರೀಕ್ಷೆಗಳು ಮಾರ್ಚ್ ೧ರಿಂದ ಆರಂಭಗೊಂಡು ೨೬ರ ತನಕ ಮುಂದುವರಿಯಲಿದೆ. ಎಸ್‌ಎಸ್‌ಎಲ್‌ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳು ಬೆಳಿಗ್ಗೆ ೯.೩೦ಕ್ಕೆ ಆರಂಭಗೊಳ್ಳಲಿದೆ. ಎಸ್‌ಎಸ್‌ಎಲ್‌ಸಿ ಮೋಡೆಲ್ ಪರೀಕ್ಷೆಗಳು ಫೆ. ೧೯ರಂದು ಆರಂಭಗೊಂಡು ೨೩ರ ತನಕ ಮುಂದುವರಿಯಲಿದೆ. ಈ ಪರೀಕ್ಷೆ ಬೆಳಿಗಗೆ ೯.೪೫ರಿಂದ ೧೧.೩೦ರ ತನಕ, ನಂತರ ಮಧ್ಯಾಹ್ನ ೨ ಗಂಟೆಯಿಂದ ೩.೪೫ರ ತನಕ ನಡೆಯಲಿದೆಯೆಂದೂ ಸಚಿವರು ತಿಳಿಸಿದ್ದಾರೆ.