ಕಾಸರಗೋಡು: ಮಾಜಿ ಅನಿವಾಸಿ, ಕೃಷಿಕನಾದ ಸಿರಿಬಾಗಿಲು ಮುಳಿಕಂಡಂ ನಿವಾಸಿ ಎಸ್.ಎ ಅಬ್ದುಲ್ಲ (7೦) ನಿಧನಹೊಂದಿದರು. ಸಿರಿಬಾಗಿಲು ಜಮಾಅತ್ ಕಮಿಟಿ, ಸಿರಿಬಾಗಿಲು ಶಾಖೆ ಮುಸ್ಲಿಂ ಲೀಗ್ ಕಮಿಟಿ, ಭತ್ತಕೃಷಿ ಗದ್ದೆಬಯಲು ಸಮಿತಿ ಎಂಬಿವುಗಳ ಪದಾಧಿಕಾರಿಯಾಗಿದ್ದರು.
ಇವರ ಪತ್ನಿ ಸಫಿಯ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ ಅರಫಾತ್, ಅರ್ಷಾದ್, ಅಶ್ಫರ್, ಅನ್ಫರ್, ಅಲ್‌ಅಮೀನ್, ಆದಿಲ, ಅಳಿಯ-ಸೊಸೆಯಂದಿರಾದ ಬಾಸಿತ್ ಪಟ್ಲ, ಫಾತಿಮ, ಖೈರುನ್ನಿಸ, ಸಹೋದರ-ಸಹೋದರಿಯರಾದ ಎಸ್.ಎ ಮೊಯ್ದು ಎಸ್.ಎ. ಅಬ್ದುಲ್ ರಹ್ಮಾನ್ , ನಬೀಸ (ಕುನ್ನಿಲ್ ಮೊಗ್ರಾಲ್ ಪುತ್ತೂರು), ಮರಿಯಮ್ಮ (ಮಂಜತ್ತಡ್ಕ), ಖದೀಜ (ಆದೂರು), ಸೈನಬಾ (ಚೇರಂಗೈ ಕಡಪ್ಪುರ), ರುಖಿಯ (ಅಂಗಡಿಮೊಗರು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇತರ ಸಹೋದರರಾದ ಎಸ್.ಎ. ಮುಹಮ್ಮದ್, ಎಸ್.ಎ. ಕುಂಞಾಲಿ, ಎಸ್.ಎ ಖಾದರ್ ಈ ಹಿಂದೆ ನಿಧನರಾಗಿದ್ದಾರೆ.





