ಎ.ಕೆ.ಪಿ.ಎಯಿಂದ ಮಹಿಳಾ ದಿನಾಚರಣೆ
ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿ ಯೇಷನ್ ವೆಸ್ಟ್ ಯೂನಿಟ್ ಇದರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ತಚ್ಚಂಗಾಡ್ ನಿವಾಸಿ ವಿಲಾಸಿನಿ ರಾಜನ್‌ರ ನಿವಾಸಕ್ಕೆ ತೆರಳಿ ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ, ಎಕೆಪಿಎ ಕಾಸರಗೋಡು ವಲಯ ಕೋಶಾಧಿ ಕಾರಿ ಮನು ಸ್ಮರಣಿಕೆ ನೀಡಿ ಗೌರವಿಸಿ ದರು. ಈ ಸಂದರ್ಭದಲ್ಲಿ ಯೂನಿಟ್ ಸಾಂತ್ವನ ಕೋರ್ಡಿನೇಟರ್ ಶಾಲಿನಿ ರಾಜೇಂದ್ರನ್, ಸಮಿತಿ ಸದಸ್ಯರಾದ ಚಂದ್ರಶೇಖರ, ಸುಬ್ರಹ್ಮಣ್ಯ, ಯೂನಿಟ್ ಕೋಶಾಧಿಕಾರಿ ಗಣೇಶ್ ರೈ ಉಪಸ್ಥಿತರಿದ್ದರು.