ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ರಮದಾನಕ್ಕೆ ಚಾಲನೆ
ಏತಡ್ಕ: ದೇವಸ್ಥಾನಗಳಲ್ಲಿ ನಾವು ಮಾಡುವ ಶ್ರಮದಾನ ಒಂದು ಶ್ರೇಷ್ಠ ಸೇವೆ ಎಂದು ಪರಿಗಣಿಸಬೇಕು, ರಾಮಸೇತುವೆ ಸಂದರ್ಭದಲ್ಲಿ ಅಳಿಲು ಮಾಡಿದ ಸೇವೆಯಂತೆ ಸೇವಾ ಮನೋಭಾವದ ಮೂಲ ನಮ್ಮ ದೇವಾಲಯಗಳು. ಭಕ್ತಿ ಶ್ರದ್ಧೆ, ಶ್ರಮದಾನವೇ ಬಂಡವಾಳ ಎಂದು ಸಾಮಾಜಿಕ ನೇತಾರ ಪತ್ತಡ್ಕ ರಾಧಾಕೃಷ್ಣ ಭಟ್ ಹೇಳಿದರು.
ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜರಗಿದ ಮೊದಲ ‘ಶಿವಾರ್ಪಣಂ’ ಶ್ರಮದಾನದ ಸಂದರ್ಭ ಅವರು ಮಾತನಾಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ. ಶಾಮ ಭಟ್ ಅವರಿಗೆ ಹೆಂಚು ನೀಡುವ ಮೂಲಕ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ಲಾವಣ್ಯ, ಶಶಿಕಲಾ ಈಳಂತೋಡಿ, ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಕೆ.ಕೆ., ಖಜಾಂಚಿ ವೈ.ವಿ. ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಸಮಿತಿಯ ಸಂಯೋಜಕ ಚಂದ್ರಶೇಖರ ಏತಡ್ಕ ನಿರೂಪಿಸಿದರು.