ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಇಂದಿನಿಂದ

ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲ ಶೋತ್ಸವ ಇಂದು ಆರಂಭವಾಯಿತು. ಬೆಳಿಗ್ಗೆ ಭಜನಾರ್ಪಣಮ್ ಉದ್ಘಾಟನೆಗೊಳ್ಳಲಿದೆ.  ರಾಮಕೃಷ್ಣ ಕಾಟುಕುಕ್ಕೆ ದೀಪ ಬೆಳಗಿಸಿ ಭಜನೆಗೆ ಚಾಲನೆ ನೀಡಿದರು. ವಿವಿಧ  ತಂಡಗಳಿಂದ ಭಜನೆ ನಡೆಯಿತು. ಹಸಿರುವಾಣಿ ಏತಡ್ಕ ಪೇಟೆಯಿಂದ ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ಮುಹೂರ್ತ ನಡೆಯಿತು.  ಸಂಜೆ 4.30ಕ್ಕೆ ಎಡನೀರು ಮಠಾಧೀಶ  ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರಿಗೆ ಪೂರ್ಣಕುಂಭ ಸ್ವಾಗತ, ಶೋಭಾಯಾತ್ರೆ ನಡೆಯಲಿದೆ.  ಕೆ.ಕೆ. ಶೆಟ್ಟಿ, ವಸಂತ ಪೈ ಬದಿಯಡ್ಕ, ಸಿ.ಎ. ಸುಧೀರ್ ಕುಮಾರ್ ಶೆಟ್ಟಿ ಬ್ರಹ್ಮಕಲಶೋತ್ಸವ ಸಮಿತಿ ಅಧಕ್ಷ ವೈ. ಶ್ಯಾಮ ಭಟ್ ಬೆಂಗಳೂರ ಉಪಸ್ಥಿತರಿರುವರು. ಸಂಜೆ ಕಲಾರ್ಪಣಮ್ ವೇದಿಕೆಯಲ್ಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದವರಿಂದ ಶಿವಲೀಲಾಮೃತ ಯಕ್ಷಗಾನ ಬಯಲಾಟ ನಡೆಯಲಿದೆ.

ಸಿಂಧು ನದಿ, ಲಡಾಕ್, ಗಂಗಾಜಲ, ಹೃಷಿಕೇಶ, ಗಂಗ, ಯಮುನ, ಸರಸ್ವತ, ಪ್ರಯಾಗ್‌ರಾಜ್, ಕುಂಭ ಮೇಳ, ವೈಷ್ಣೋದೇವಿ ತೀರ್ಥ ಸಹಿತ ೨೧ಕ್ಕೂ ಹೆಚ್ಚು ನದಿಗಳ ಜಲ, ಕೈತಪ್ರಂ ಯಜ್ಞಭೂಮಿ, ಕುಮಾರಪರ್ವತ, ಚಾಮುಂಡಿಬೆಟ್ಟ ಮೊದಲಾದ ಸ್ಥಳಗಳ ಮೃತ್ತಿಕೆ, ಎತ್ತಿನಕೊಂಬಿನ ಮಣ್ಣುಗಳನ್ನು ತಂತ್ರಿಗಳ ಆದೇಶದಂತೆ ಬ್ರಹ್ಮಕಲ ಶಾಭಿಷೇಕಕ್ಕಾಗಿ ಸಂಗ್ರಹಿಸಲಾ ಗಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page