ಏತಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶಾಭಿಷೇಕ ಸಮಾಪ್ತಿ
ಏತಡ್ಕ: ಏತಡ್ಕ ಶ್ರೀಸದಾಶಿವ ದೇವ ಸ್ಥಾನದಲ್ಲಿ ನಿನ್ನೆ ಶ್ರೀ ದೇವರಿಗೆ ಸಹಸ್ರ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ಸಹಸ್ರಾರು ಭಜಕರ ಸಮ್ಮುಖದಲ್ಲಿ ಸಮÁಪ್ತಿಗೊಂಡಿತು. ಪೂರ್ವಾಹ್ನ 108 ತೆಂಗಿನಕಾಯಿಗಣಪತಿ ಹೋಮ, ಪ್ರತಿಷ್ಠಾಪಾಣಿ, ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೆಕ, ಪ್ರತಿಷ್ಠಾಬಲಿ, ಮಹಾಪೂಜೆ ನಡೆಯಿತು. ಮಧ್ಯಾಹ್ನ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಗಳವರ ಆಗಮನ, ಪೂರ್ಣಕುಂಭ ಸ್ವಾಗತ, ಶೋಭಾಯಾತ್ರೆ ನಡೆಯಿತು. ಸಪ್ತಸ್ವರ ಸಂಗೀತ ಶಾಲೆ ಪುತ್ತೂರು, ಸಾಮೂಹಿಕ ರುದ್ರ ಪಾರಾಯಣ ಸೇವೆ, ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ವಿದ್ಯಾರ್ಥಿಗಳಿಂದ ಶಾಸ್ತಿçÃಯ ಸಂಗೀತ ಹಾಗೂ ಯಕ್ಷ ಗಾನ ಬಯಲಾಟ ಪ್ರದರ್ಶನಗೊಂ ಡಿತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ವೈದಿಕಕಾರ್ಯಕ್ರಮಗಳಿಗೆ ನೇತೃತ್ವ ನೀಡಿದರು.