ಐಎಂಎ ಸದಸ್ಯತನ ಅಭಿಯಾನ ಪ್ರಯಾಣ ಆರಂಭ

ಕಾಸರಗೋಡು: ಸಂಘಟನೆಯನ್ನು ಬಲಪಡಿಸುವುದು, ಸದಸ್ಯತನ ಹೆಚ್ಚಿಸು ವುದು ಎಂಬ ಉದ್ದೇಶದೊಂದಿಗೆ ಐಎಂಎ ರಾಜ್ಯ ಅಧ್ಯಕ್ಷ ಡಾ| ಕೆ. ಶ್ರೀವಿಲಾಸ್‌ರ ನೇತೃತ್ವದಲ್ಲಿ ಐಎಂಎ ಕೇರಳ ಯಾತ್ರೆ ಕಾಸರಗೋಡಿನಿಂದ ಆರಂಭಗೊಂಡಿತು. ಮಾಜಿ ರಾಷ್ಟ್ರಾಧ್ಯಕ್ಷ ಡಾ| ಬಾಬು ರವೀಂದ್ರನ್, ಪ್ರಯಾಣ ವನ್ನು ನಗರದ ಹೊಸ ಬಸ್ ನಿಲ್ದಾಣ ಸಮೀಪ ಫ್ಲಾಗ್‌ಆಫ್ ನಡೆಸಿದ ಉದ್ಘಾಟಿಸಿದರು. ಕಾಸರಗೋಡು ಬ್ರಾಂಚ್ ಅಧ್ಯಕ್ಷ ಡಾ| ಹರಿಕಿರಣ್ ಬಂಗೇರ ಅಧ್ಯಕ್ಷತೆ ವಹಿಸಿದರು. ಮಾಜಿ ರಾಜ್ಯಾಧ್ಯಕ್ಷ ಡಾ| ಜೋಸೆಫ್ ಬೆನವನ್, ರಾಜ್ಯ ಕಾರ್ಯದರ್ಶಿ ಡಾ| ಶಶಿಧರನ್ ಕೆ, ಉತ್ತರ ವಲಯ ಉಪಾಧ್ಯಕ್ಷೆ ಡಾ| ಅಜಿತಾ ಪಿ.ಎನ್, ರಾಜ್ಯ ಮುಖಂಡರಾದ ಡಾ| ಸುದರ್ಶನ್, ಡಾ| ಗೋಪಿನಾಥನ್, ಡಾ| ಗೋಪಿ ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷ ಡಾ| ಬಿ. ನಾರಾಯಣ ನಾಯ್ಕ್, ಡಾ| ದೀಪಿಕಾ ಕಿಶೋರ್, ಡಾ| ಖಾಸಿಂ ಟಿ, ಡಾ| ಜಿತೇಂದ್ರ ರೈ, ಡಾ| ಮಾಯಾ ಮಲ್ಯ, ಡಾ| ರೇಖಾ ರೈ, ಡಾ| ಅಣ್ಣಪ್ಪ ಕಾಮತ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page