ಐತ್ತ ಮಾನ್ಯ ಅವರಿಗೆ ಕರ್ಷಕರತ್ನ ರಾಷ್ಟ್ರೀಯ ಪುರಸ್ಕಾರ
ಬದಿಯಡ್ಕ : ಪ್ರಗತಿಪರ , ಪ್ರಯೋಗಶೀಲ ಕೃಷಿಕ ಐತ್ತ ಮಾನ್ಯ ಕರ್ಷಕ ರತ್ನ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಡಿ.15ರಂದು ನವದೆಹಲಿಯಲ್ಲಿ ನಡೆಯುವ ಬಹುಜನ ಸಾಹಿತ್ಯ ಅಕಾಡೆಮಿಯ 17ನೇ ರಾಷ್ಟ್ರೀಯ ಸಮಾವೇಶದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಬಿ .ಎಸ್. ಎ ಯ ರಾಷ್ಟ್ರೀಯ ಅಧ್ಯಕ್ಷ ನಲ್ಲಾ ರಾಧಾಕೃಷ್ಣನ್ ತಿಳಿಸಿದ್ದಾರೆ.
ಐತ್ತ ಮಾನ್ಯ ಅವರು ಕೆನರಾ ಬ್ಯಾಂಕಿನಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೀನಿಯರ್ ಮೆನೇಜರ್ ಹುದ್ದೆಯಿಂದ ನಿವೃತ್ತರಾದವರು. ಕೃಷಿ ಕಾರ್ಮಿಕ ಕುಟುಂಬದಿAದ ಬಂದ ಅವರ ಸಾಧನೆಗೆ ಕೇರಳ ರಾಜ್ಯ ಪ್ರಶಸ್ತಿ , ಸ್ಥಳೀಯಾಡಳಿತ ಸಂಸ್ಥೆಗಳಿAದ ಆದರ್ಶ ಕೃಷಿಕ ಪ್ರಶಸ್ತಿ ಲಭಿಸಿದೆ. ಮಾನ್ಯದಲ್ಲಿ ಬಂಜರು ಭೂಮಿಯನ್ನು ಕೃಷಿ ಯೋಗ್ಯವಾಗಿಸಿ ತೆಂಗು, ಕಂಗು , ಬತ್ತ ಕೃಷಿ , ಹೈನುಗಾರಿಕೆ ಯನ್ನು ಲಾಭದಾಯಕವಾಗಿಸಿದ್ದಾರೆ. ಅವರ ಕೃಷಿ ಕಾಯಕಕ್ಕೆ ಪತ್ನಿ, ಶಿಕ್ಷಕಿ ಲಲಿತಾ ಉಳಿಯ ಬೆಂಬಲ ನೀಡುತ್ತಿದ್ದಾರೆ.