ಐಲ ಕ್ಷೇತ್ರದಲ್ಲಿ ವಿಷು ಜಾತ್ರೆ: ವಿರಾಟ್ ಭಜನಾ ನೃತ್ಯ, ಬೆಡಿ ಉತ್ಸವ ನಾಳೆ
ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಷು ಜಾತ್ರಾ ಶನಿವಾರ ಧ್ವಜಾರೋಹಣದೊಂದಿಗೆ ಆರಂಭಗೊAಡು ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕöೄತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿAದ ನಡೆಯುತ್ತಿದೆ. ಇದರಂಗವಾಗಿ ನಾಳೆ ಪೂರ್ವಾಹ್ನ ನಿತ್ಯ ಪೂಜೆ ಹಾಗೂ ವಿವಿಧ ವೈಧಿಕ ಕಾರ್ಯಕ್ರಮ, ಮಧ್ಯಾಹ್ನ 12.30ರಿಂದ ಹೂವಿನ ಪೂಜೆ, ಮಹಾಪೂಜೆ, ಬಲಿ ಉತ್ಸವ, 12.30ರಿಂದ ತಾಳಮದ್ದಳೆ, ರಾತ್ರಿ 7.30ರಿಂದ ಪೂಜೆ, ಬಲಿ ಉತ್ಸವ, ರಾಜಾಂಗಣ ಪ್ರಸಾದ, ಕೆರೆದೀ ಪೋತ್ಸವ, ರಾತ್ರಿ 10ರಿಂದ ಐಲ ಮೈದಾನದಲ್ಲಿ ವಿವಿಧ ಕುಣಿತ ಭಜನಾ ತಂಡಗಳ ಸಮ್ಮಿಲನದೊಂದಿಗೆ ಏಕಕಾಲದಲ್ಲಿ ವಿರಾಟ್ ನೃತ್ಯ ಭಜನಾ ಸಂಭ್ರಮ, ಕಟ್ಟೆಪೂಜೆ, ಸಾರ್ವಜನಿಕ ಬೆಡಿ ಉತ್ಸವ ಜರಗಿಲಿದೆ. ಈ ತಿಂಗಳ 18ರಂದು ಜಾತ್ರೆ ಸಮÁಪ್ತಿಗೊಳ್ಳಲಿದೆ.