ಐವರು ವಾರಂಟ್ ಆರೋಪಿಗಳ ಸೆರೆ
ಉಪ್ಪಳ: ವಿವಿಧ ಪ್ರಕರಣಗಳಲ್ಲಿ ವಾರಂಟ್ ಆರೋಪಿಗಳಾದ ಐದು ಮಂದಿಯನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಮಂಜೇಶ್ವರ ತೂಮಿನಾಡಿನ ಇಸ್ಮಾಯಿಲ್ (30), ಬಡಾಜೆ ಚೌಕಿಯ ಮೊಹಮ್ಮದ್ ಅಶ್ರಫ್ (42), ಪೈವಳಿಕೆ ಆಚೆಕೆರೆಯ ಹರ್ಷಾದ್, ಬೇಕೂರು ನಿವಾಸಿಗಳಾದ ಖಾಸಿಂ (38), ಶಂಸುದ್ದೀನ್ (32) ಎಂಬಿವರು ಬಂಧಿತ ಆರೋಪಿಗಳಾ ಗಿದ್ದಾರೆ. ನಿನ್ನೆ ರಾತ್ರಿಯಿಂದ ಇಂದು ಮುಂಜಾನೆವರೆಗೆ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಟೋನ್ಸನ್ ಜೋಸೆಫ್ ನೇತೃತ್ವದಲ್ಲಿ ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.