ಐಷಾರಾಮಿ ಜೀವನದ ಜೊತೆಗೆ ಬಿಸಿಎ ಕಲಿಕೆ : ಬೆಂಗಳೂರಿನಲ್ಲಿ ಸೆರೆಯಾದ ಪ್ರಿನ್ಸಿ ರಾಜ್ಯಕ್ಕೆ ಮಾದಕಪದಾರ್ಥ ಸಾಗಿಸುವ ಕೊಂಡಿ
ಬೆಂಗಳೂರು: ರಾಜ್ಯಕ್ಕೆ ಮಾದಕ ಪದಾರ್ಥಗಳನ್ನು ತಲುಪಿಸುವ ಪ್ರಮುಖ ಕೊಂಡಿ ಟಾನ್ಸಿಯಾ ಪ್ರಜೆಯನ್ನು ಬೆಂಗಳೂರಿನಿಂದ ವಯ ನಾಡು ಪೊಲೀಸರು ಸೆರೆಹಿಡಿದಿದ್ದಾರೆ. ಗೋಬಾ ವಿಲ್ಲೇಜ್‌ನ ಪ್ರಿನ್ಸ್ ಸಂಸಾನ್ (25)ನನ್ನು ಮಾದಕಪದಾರ್ಥ ವಿರುದ್ಧ ತಂಡ ಹಾಗೂ ಬತ್ತೇರಿ ಪೊಲೀಸರು ಜಂಟಿಯಾಗಿ ಸೆರೆಹಿಡಿದಿ ದ್ದಾರೆ. ಎಂ.ಎಸ್. ನಗರದಲ್ಲಿ ಈತ ವಾಸಿಸುವ ಪ್ಲ್ಯಾಟ್‌ನಿಂದ ಬತ್ತೇರಿ ಇನ್‌ಸ್ಪೆಕ್ಟರ್ ರಾಘವನ್‌ರ ನೇತೃತ್ವದಲ್ಲಿ ರುವ ಪೊಲೀಸ್ ತಂಡ ಈತನನ್ನು ಕಸ್ಟಡಿಗೆ ತೆಗೆದಿದೆ. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿ ದ್ದಾನೆ. ಕಳೆದ ತಿಂಗಳ 24ರಂದು ಮುತ್ತಂಙದಲ್ಲಿ ಮಾದಕಪದಾರ್ಥ ಸಹಿತ ಸೆರೆಯಾದ ಶಫೀಕ್ ಎಂಬಾತನಿಂದ ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮೊಬೈಲ್ ಫೋನ್ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಆದಿತ್ಯವಾರ ರಾತ್ರಿ ಬೆಂಗಳೂರಿನಿಂದ ಆರೋಪಿಯನ್ನು ಸೆರೆಹಿಡಿಯಲಾ ಗಿದೆ. ಎರಡು ತಿಂಗಳೊಳಗೆ ಈತ 80 ಲಕ್ಷ ರೂ.ಗಳ ವ್ಯವಹಾರ ನಡೆಸಿದ್ದಾ ನೆನ್ನಲಾಗಿದೆ. ಈತನಿಂದ 5 ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್ ಎಂಬಿವುಗಳನ್ನು ವಶಪಡಿಸಲಾಗಿದೆ.