ಒಣಗಲು ಹಾಕಿದ್ದ ಬಟ್ಟೆ ತೆಗೆಯುತ್ತಿದ್ದಾಗ ವಿದ್ಯುತ್ ತಂತಿಯಿಂದ ಶಾಕ್ ತಗಲಿ ಬಾಲಕಿ ಮೃತ್ಯು
ಪೆರ್ಲ: ಒಣಗಲು ಹಾಕಿದ್ದ ಬಟ್ಟೆಬರೆಗಳನ್ನು ತೆಗೆಯುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಶಾಕ್ ತಗಲಿ ಬಾಲಕಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ.
ಪೆರ್ಲ ಬಳಿಯ ಕುದ್ವ ನಿವಾಸಿ ಯೂ ಇಡಿಯಡ್ಕದಲ್ಲಿ ವಾಸಿಸುವ ಇಸ್ಮಾಯಿಲ್ ಎಂಬವರ ಪುತ್ರಿ ಫಾತಿಮಾ (17) ಮೃತಪಟ್ಟ ದುರ್ದೈವಿಯಾಗಿದ್ದಾಳೆ. ನಿನ್ನೆ ಬೆಳಿಗ್ಗೆ 10 ಗಂಟೆ ವೇಳೆ ಈ ದಾರುಣ ಘಟನೆ ಸಂಭವಿಸಿದೆ. ಬಟ್ಟೆ ತೊಳೆದು ಒಣಗಲು ಹಾಕಲಾಗಿತ್ತು. ಅದನ್ನು ತೆಗೆಯುತ್ತಿದ್ದ ವೇಳೆ ಫಾತಿಮಳಿಗೆ ಸಮೀಪದ ವಿದ್ಯುತ್ ತಂತಿಯಿಂದ ಶಾಕ್ ತಗಲಿದೆ. ಫಾತಿಮಳ ಬೊಬ್ಬೆ ಕೇಳಿ ಅಲ್ಲಿಗೆ ತಲುಪಿದ ತಾಯಿ ಅವ್ವಮ್ಮ ರಕ್ಷಿಸಲೆತ್ನಿಸಿದ್ದು, ಈ ವೇಳೆ ಅವರು ಕೂಡಾ ಗಾಯಗೊಂಡಿದ್ದಾರೆ. ಅವರನ್ನು ಚೆಂಗಳದ ಇ.ಕೆ. ನಾಯನಾರ್ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.