ಒ.ಆರ್. ಕೇಳುರವರಿಗೆ ಸಚಿವ ಸ್ಥಾನ: ಆದಿವಾಸಿ ಕ್ಷೇಮ ಸಮಿತಿಯಿಂದ ಅಭಿನಂದನೆ
ಪೈವಳಿಕೆ: ಆದಿವಾಸಿ ಕ್ಷೇಮ ಸಮಿತಿಯ ರಾಜ್ಯ ಅಧ್ಯಕ್ಷರಾಗಿದ್ದ ಒ.ಆರ್. ಕೇಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಚಿವರಾಗಿ ಅಧಿಕಾರ ಸ್ವೀಕರಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿ ಪಿ.ಕೆ.ಎಸ್. ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಪೈವಳಿಕೆಯಲ್ಲಿ ಅಭಿನಂದನಾ ರ‍್ಯಾಲಿ ನಡೆಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಸೀತಾರಾಮ ನಾಯ್ಕ್ ಬೋಳಂಗಳ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಅಶೋಕನ್ ಮಾತನಾಡಿದರು. ರಾಮ ನಾಯ್ಕ್ ಸೋಂದಿ, ಕೃಷ್ಣ ನಾಯ್ಕ್ ಕೊಮ್ಮಂಗಳ, ಮಾಧವ ನಾಯ್ಕ್ ಮಾನಿಪ್ಪಾಡಿ, ಶಿವ ಮಾನಿಪ್ಪಾಡಿ, ಈಶ್ವರ ನಾಯ್ಕ್ ತಲೆಂಗಳ, ಎಸ್.ಟಿ. ಪ್ರಮೋಟರ್ ಶೀಲಾವತಿ, ನಾರಾಯಣ ನಾಯ್ಕ್ ನೇತೃತ್ವ ನೀಡಿದರು. ಏರಿಯಾ ಕಾರ್ಯದರ್ಶಿ ಚಂದ್ರ ನಾಯ್ಕ್ ಸ್ವಾಗತಿಸಿ, ಸರೋಜ ಬಿ. ವಂದಿಸಿದರು.