ಓಣಂ: ನೀಲಿ-ಬಿಳಿ ಕಾರ್ಡ್‌ಗಳಿಗೆ 10 ಕಿಲೋ ಹೆಚ್ಚುವರಿ ಅಕ್ಕಿ

ತಿರುವನಂತಪುರ: ಓಣಂ ಹಬ್ಬದ ಸಲುವಾಗಿ ನೀಲಿ ಮತ್ತು ಬಿಳಿ ಬಣ್ಣದ ರೇಶನ್ ಕಾರ್ಡ್‌ದಾರರಿಗೆ ತಲಾ 10 ಕಿಲೋದಂತೆ ಹೆಚ್ಚುವರಿ ಅಕ್ಕಿ ವಿತರಿಸಲಾಗುವುದೆಂದು. ರಾಜ್ಯ ಆಹಾರ- ನಾಗರಿಕಾ ಸರಬರಾಜು ಖಾತೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ.

ತೆರೆದ ಮಾರುಕಟ್ಟೆಗಳಲ್ಲಿ ಕಿಲೋ ಒಂದಕ್ಕೆ 55 ರೂ.ನಿಂದ 6೦ ರೂ. ತನಕ ಬೆಲೆ ಇರುವ ಅಕ್ಕಿಯನ್ನು ಹೀಗೆ ಹೆಚ್ಚುವರಿಯಾಗಿ ವಿತರಿಸಲಾಗುವುದು. ರಾಜ್ಯದ 52 ಲಕ್ಷದಷ್ಟು ಕುಟುಂಬಗಳಿಗೆ ಇದರ ಪ್ರಯೋಜನ ಲಭಿಸಲಿದೆ. ಇನ್ನು ಬಿಪಿಎಲ್ ಕಾರ್ಡ್‌ದಾರರಿಗೆ ವಿತರಿಸ ಲಾಗುತ್ತಿರುವ 30 ಕಿಲೋ ಅಕ್ಕಿಯಲ್ಲಿ ಶೇ. 50ರಷ್ಟು, ಇದೇ ಅಕ್ಕಿ ವಿತರಿಸು ವಂತೆಯೂ ನಿರ್ದೇಶ ನೀಡಲಾಗಿದೆ. ಶಾಲಾ ವಿದ್ಯಾರ್ಥಿಗಳಿಗಿರುವ ತಲಾ ಐದು ಕಿಲೋ ಅಕ್ಕಿಯನ್ನು ಓಣಂ ಹಬ್ಬದ ಮೊದಲು ವಿತರಿಸಲಾಗುವು ದೆಂದೂ ಸಚಿವರು ತಿಳಿಸಿದ್ದಾರೆ.

RELATED NEWS

You cannot copy contents of this page