ಓಣಂ ಮಾರುಕಟ್ಟೆಯಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳು ಲಭ್ಯಗೊಳಿಸಲು  ಕ್ರಮ

ಮಂಜೇಶ್ವರ : ಓಣಂ ಮಾರುಕಟ್ಟೆ ಯಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳು ಲಭ್ಯವಾಗುವಂತೆ ಮಾಡಲು ನವ ಕೇರಳ ಕ್ರಿಯಾ ಯೋಜನೆಯ ಮಂ ಜೇಶ್ವರ ಬ್ಲೋಕ್ ಮಿಷನ್ ಸಮಾ ಲೋಚನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಬ್ಲೋಕ್ ಪಂಚಾ ಯತ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಮೀನ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ನವ ಕೇರಳ ಕ್ರಿಯಾ ಯೋಜನೆ ಜಿಲ್ಲಾ ಕೋ-ಆರ್ಡಿನೇಟರ್ ಕೆ. ಬಾಲಕೃಷ್ಣನ್ ಪ್ರಾಸ್ತಾ ವಿಕ ಭಾಷಣ ಮಾಡಿದರು. ಬ್ಲೋಕ್‌ನ ವಿವಿಧ ಪಂಚಾಯತ್‌ಗಳಲ್ಲಿ 30,000 ದಷ್ಟು ತರಕಾರಿ ಬೀಜಗಳು ಹಾಗೂ ಗಿಡಗಳನ್ನು ಕೃಷಿ ಭವನದ ಮೂಲಕ ವಿತರಣೆ ಮಾಡಲಾಗಿದೆ. ಕೈಗಾರಿಕಾ ಕೇಂದ್ರಗಳಲ್ಲಿ ಕೃಷಿ, ಪರಿಸರ ಸಂರಕ್ಷಣೆ, ಹಸಿರುವನ, ಜಲ ಸಂರಕ್ಷಣೆ, ಲೈಫ್ ಮಿಷನ್, ಹಸಿರು ಕೇರಳ ಮಿಷನ್, ವಿದ್ಯಾಕಿರಣ, ಆರ್ದ್ರ ಮಿಷನ್ ಯೋ ಜನೆಗಳ ಕುರಿತು ಸಮಗ್ರ ಪರಿಶೀಲನೆ ಮಾಡಲಾಯಿತು. ಪಂ. ಅಧ್ಯಕ್ಷೆಯಾದ ಸುಂದರಿ ಆರ್.ಶೆಟ್ಟಿ, ಭಾರತಿ.ಎಸ್,ಕೃಷಿ ಅಸಿಸ್ಟೆಂಟ್ ನಿರ್ದೇಶಕ ಅರ್ಜಿತ, ಪಿ.ಕೆ ತಿರುಮಲೇಶ, ಅಮೃತ. ಜಿ.ಎ, ಗೋಕುಲನ್ ಟಿ, ಕೆ.ಬೀನ , ರಾಮಚಂದ್ರನ್ ಪಿ.ಕೆ, ವಿನಯ್ ಕುಮಾರ್ ಬಾಯಾರು ಮಾತನಾಡಿದರು. ಮನೋಜ್ ಎಸ್ ಸ್ವಾಗತಿಸಿದರು.

RELATED NEWS

You cannot copy contents of this page