ಓಣಂ ಲಾಟರಿ ಡ್ರಾ ಇಂದು: ಜಿಲ್ಲೆಯಲ್ಲಿ ಟಿಕೆಟ್ ಮಾರಾಟದಲ್ಲಿ ಕಡಿತ
ಕಾಸರಗೋಡು: ಓಣಂ ಬಂಪರ್ ಲಾಟರಿ ಟಿಕೆಟ್ ಮಾರಾಟದಲ್ಲಿ ಕಳೆದ ವರ್ಷಕ್ಕಿಂತ ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಕಡಿಮೆ ಮಾರಾಟ ನಡೆದಿದೆ. ನಿನ್ನೆ ಸಂಜೆ ವರೆಗೆ ಲಾಟರಿ ಕಚೇರಿಯ ಕಾಸರಗೋಡು, ಕಾಞಂಗಾಡ್ ಕಚೇರಿಗಳಲ್ಲಿ ಮರಾಟವಾಗಿರುವುದು 2.33 ಲಕ್ಷ ಟಿಕೆಟ್‌ಗಳಾಗಿವೆ. ಕಾಸರಗೋಡು ಜಿಲ್ಲಾ ಲಾಟರಿ ಕಚೇರಿ ಮೂಲಕ ನಿನ್ನೆ ಮಾತ್ರವಾಗಿ 1800 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ.
ಕಳೆದ ವರ್ಷ ಜಿಲ್ಲೆಯ ಲಾಟರಿ ಕಚೇರಿಗಳಲ್ಲಿ 2.45 ಲಕ್ಷ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿದೆ. ಕಾಸರಗೋಡು ಕಚೇರಿಯಿಂದ ೧೫೦೫೫೦ ಟಿಕೆಟ್‌ಗಳು, ಕಾಞಂಗಾ ಡ್‌ನಿಂದ 83250 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಡ್ರಾ ದಿನಾಂಕವಾದ ಇಂದು ಕೂಡಾ ಮಾರಾಟ ಸಾಧ್ಯತೆ ಇದೆ. ಅಗೋಸ್ತ್ 2ರಂದು ಓಣಂ ಬಂಪರ್ ಲಾಟರಿ ಟಿಕೆಟ್‌ಗಳ ಮಾರಾಟ ಆರಂಭಿಸಿತ್ತು.
25 ಕೋಟಿ ರೂ. ಪ್ರಥಮ ಬಹುಮಾನವಾಗಿದೆ. 20 ಮಂದಿಗೆ 1 ಕೋಟಿ ರೂ.ನಂತೆ ದ್ವಿತೀಯ ಬಹುಮಾನ, 50 ಲಕ್ಷ ರೂ.ನಂತೆ 20 ಮಂದಿಗೆ ಮೂರನೇ ಬಹುಮಾನ ಲಭಿಸುವುದು.