ಓಣಂ ಹಬ್ಬಾಚರಣೆ: ಕಾಸರಗೋಡಿಗೆ ತಲುಪಿದ ವಿವಿಧ ಹೂವುಗಳ ರಾಶಿ
ಕಾಸರಗೋಡು: ಓಣಂ ಹಬ್ಬಾಚರಣೆಗೆ ನಾಡು, ನಗರ ಸಿದ್ಧಗೊಂಡಿದೆ. ಬಟ್ಟೆಬರೆ ಸಹಿತ ವಿವಿಧ ಸಾಮಗ್ರಿಗಳ ಖರೀದಿಗೆ ಭಾರೀ ಸಂಖ್ಯೆಯಲ್ಲಿ ಜನರು ಪೇಟೆಗೆ ತಲುಪುತ್ತಿದ್ದಾರೆ. ಇದೇ ವೇಳೆ ಪ್ರತೀವರ್ಷದಂತೆ ಈ ಬಾರಿಯೂ ಭಾರೀ ಪ್ರಮಾಣದ ಹೂವು ಕಾಸರಗೋಡಿಗೆ ತಲುಪಿದೆ. ಕರ್ನಾಟಕದ ಹಾಸನ, ಮೈಸೂರು ಸಹಿತ ವಿವಿಧೆಡೆಗಳಿಂದಾಗಿ ನೂರೈವತ್ತಕ್ಕೂ ಹೆಚ್ಚು ಮಂದಿ ಹೂವು ಮಾರಾಟಗಾರರು ಕಾಸರಗೋಡು ನಗರಕ್ಕೆ ತಲುಪಿದ್ದಾರೆ. ನಗರದ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ ಸಹಿತ ವಿವಿಧೆಡೆ ಹೂವುಗಳನ್ನು ರಾಶಿ ಹಾಕಿ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.
ವಿವಿಧ ಬಣ್ಣಗಳ ಸೇವಂತಿಗೆ, ಚೆಂಡುಹೂವು, ಗುಂಡಿ ಹೂವು, ಕಾಕಡ, ಗುಲಾಬಿ ಮೊದಲಾದ ಹೂವುಗಳನ್ನು ಇದರಲ್ಲಿ ಮಾರಾಟಕ್ಕಿರಿಸಿದ್ದು, ಭಾರೀ ವ್ಯಾಪಾರ ನಡೆಯಬಹುದೆಂಬ ನಿರೀಕ್ಷೆಯಿರಿಸಿಕೊಂಡಿದ್ದಾರೆ.