ಓಮ್ನಿ ವ್ಯಾನ್‌ನಲ್ಲಿ ಹೊಯ್ಗೆ ಸಾಗಾಟ: ಪೊಲೀಸರನ್ನು ಕಂಡು ವಾಹನ ಉಪೇಕ್ಷಿಸಿ ಚಾಲಕ ಪರಾರಿ
ಉಪ್ಪಳ: ಓಮ್ನಿ ವ್ಯಾನ್‌ನಲ್ಲಿ ಹೊಯ್ಗೆ ಸಾಗಿಸುತ್ತಿದ್ದ ವೇಳೆ ಪೊಲೀಸರನ್ನು ಕಂಡು ಚಾಲಕ ವಾಹನ ಉಪೇಕ್ಷಿಸಿ ಪರಾರಿಯಾಗಿದ್ದಾನೆ.
ನಿನ್ನೆ ಮುಂಜಾನೆ ೧ ಗಂಟೆ ವೇಳೆ ಉಪ್ಪಳ ಕಸಾಯಿಗಲ್ಲಿ ಎಂಬಲ್ಲಿಂದ ಹೊಯ್ಗೆ ಸಾಗಾಟದ ಓಮ್ನಿ ವ್ಯಾನ್ ವಶಪಡಿಸಲಾಗಿದೆ. ಉಪ್ಪಳ ಕಸಾಯಿಗಲ್ಲಿಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಆ ರಸ್ತೆ ಮೂಲಕ ಹೊಯ್ಗೆ ಹೇರಿದ ವಾಹನ ತಲುಪಿದೆ. ಪೊಲೀಸರನ್ನು ಕಂಡೊಡನೆ ಓಮ್ನಿ ವ್ಯಾನ್‌ನ ಚಾಲಕ ವಾಹನವನ್ನು ಉಪೇಕ್ಷಿಸಿ ಓಡಿ ಪರಾರಿಯಾಗಿದ್ದಾನೆ. ವಾಹನದಲ್ಲಿ ೧೫ ಕ್ವಿಂಟಾಲ್ ನಷ್ಟು ಹೊಯ್ಗೆಯನ್ನು ಗೋಣಿಚೀಲಗಳಲ್ಲಿ ತುಂಬಿಸಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ವಾಹನವನ್ನು ಪೊಲೀಸರು ಕಸ್ಟಡಿಗೆ ತೆಗೆದು ಕೇಸು ದಾಖಲಿಸಿಕೊಂಡಿದ್ದು, ಪರಾರಿಯಾದ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.