ಔಷಧಿಗೆಂದು ತಿಳಿಸಿ ಹೋದ ಗೃಹಿಣಿ ನಾಪತ್ತೆ
ಬದಿಯಡ್ಕ: ಔಷಧಿ ತರಲೆಂದು ತಿಳಿಸಿ ಮನೆಯಿಂದ ಹೋದ ಗೃಹಿಣಿಯೊಬ್ಬರು ಮರಳಿ ಮನೆಗೆ ತಲುಪಿಲ್ಲವೆಂದು ದೂರಲಾಗಿದೆ. ನಾರಂಪಾಡಿ ನಿವಾಸಿ ಲೀಲಾವತಿ (60) ಎಂಬವರು ನಾಪತ್ತೆಯಾಗಿದ್ದಾರೆನ್ನಲಾಗಿದೆ.
ಹಿರಿಯ ಮಗನೊಂದಿಗೆ ವಾಸಿಸುತ್ತಿದ್ದ ಇವರು ನಿನ್ನೆ ಬೆಳಿಗ್ಗೆ ಔಷಧಿಗೆಂದು ತಿಳಿಸಿ ಬದಿಯಡ್ಕ ಪೇಟೆಗೆ ತೆರಳಿದ್ದರು. ಆದರೆ ಸಂಜೆಯಾದರೂ ಮನೆಗೆ ಮರಳಿ ತಲುಪಿಲ್ಲವೆನ್ನಲಾಗಿದೆ. ಈ ಬಗ್ಗೆ ಪುತ್ರ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಇದೇ ವೇಳೆ ನಿನ್ನೆ ಬದಿಯಡ್ಕಕ್ಕೆ ತಲುಪಿದ ಲೀಲಾವತಿ ಅಲ್ಲಿನ ಆಟೋ ರಿಕ್ಷಾವೊಂದರಲ್ಲಿ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರಕ್ಕೆ ತೆರಳಿದ್ದರೆಂದು ತಿಳಿದುಬಂದಿದೆ. ಆಟೋ ಚಾಲಕ ಅವರನ್ನು ಕ್ಷೇತ್ರ ಸಮೀಪ ಇಳಿಸಿದ ಬಳಿಕ ಮಂಜೇಶ್ವರ ಭಾಗಕ್ಕೆ ಬಾಡಿಗೆಗೆ ತೆರಳಿದ್ದನು. ಬಳಿಕ ಆಟೋ ರಿಕ್ಷಾ ಮರಳಿ ಬರುತ್ತಿದ್ದಾಗ ಲೀಲಾವತಿ ಕುಂಬಳೆ ಸೇತುವೆ ಮೂ ಲಕ ನಡೆದು ಹೋಗುತ್ತಿರುವುದನ್ನು ಚಾಲಕ ಕಂಡಿದ್ದಾನೆನ್ನಲಾಗಿದೆ.
ಕೆಲವು ದಿನಗಳ ಹಿಂದೆ ಅಪ ಘಾತವೊಂದರಲ್ಲಿ ಗಾಯಗೊಡಿದ್ದ ಲೀಲಾವತಿಯ ಕಾಲಿಗೆ ಗಾಯಗಳಾ ಗಿತ್ತೆನ್ನಲಾಗಿದೆ. ಇದರಿಂದ ನಡೆಯಲು ಕಷ್ಟಪಡು ತ್ತಿದ್ದರೆನ್ನಲಾಗಿದೆ.