ಕಂಚಿಕಟ್ಟೆ-ಕೊಡ್ಯಮ್ಮೆ ಸೇತುವೆಗೆ 27 ಕೋಟಿ ರೂ.ಗಳ ಯೋಜನೆ ನಬಾರ್ಡ್ನ ಪರಿಗಣನೆಯಲ್ಲಿ
ಕುಂಬಳೆ: ಹಲವು ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಇದೀಗ ಬಲಹೀನ ಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ರೋಡ್ ಸೇಫ್ಟಿ ಅಥೋರಿಟಿಯ ನಿರ್ದೇಶ ಪ್ರಕಾರ ಒಂದು ವರ್ಷದಿಂದ ಮುಚ್ಚುಗಡೆಗೊಂ ಡಿರುವ ಕಂಚಿಕಟ್ಟೆ-ಕೊಡ್ಯಮ್ಮೆ ವಿಸಿಬಿ ಕಂ ಬ್ರಿಡ್ಜ್ ಪುನರ್ ನಿರ್ಮಾಣಕ್ಕಾಗಿ ಕ್ರಮಗಳು ಪ್ರಗತಿಯಲ್ಲಿದೆಯೆಂದು ಕಿರು ನೀರಾವರಿ ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ. ರಾಜ್ಯ ಸರಕಾರದ ‘ಕರುದಲುಂ, ಕೈತಾಂಗ್’ ಎಂಬ ಯೋಜನೆಯಂಗವಾಗಿ ಹಮ್ಮಿಕೊಂಡ ತಾಲೂಕು ಮಟ್ಟದ ಅದಾಲತ್ನಲ್ಲಿ ಆದಿ ದಲಿತ ಮುನ್ನಡೆ ಸಮಿತಿ ಜಿಲ್ಲಾಧ್ಯಕ್ಷ ಪಿ.ಕೆ. ಚಂದ್ರಶೇಖರನ್ ಕುಂಬಳೆ ಅವರು ಸಲ್ಲಿಸಿದ ಮನವಿಗೆ ಉತ್ತರವಾಗಿ ನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರತಿಕ್ರಿಯಿಸಿದ್ದಾರೆ.
ಸೇತುವೆಯನ್ನು ಮುಚ್ಚುಗಡೆಗೊಳಿ ಸಿದಾಗಲೇ ಹೊಸ ಸೇತುವೆಗಿರುವ ಪರಿಶೀಲನೆ ಪೂರ್ತಿಗೊಳಿಸಿದ್ದು, ಅದರ ನಕ್ಷೆ ಲಭ್ಯಗೊಳಿಸಲಾಗಿತ್ತು. ಆದರೆ ಅಪ್ರೋಚ್ ರೋಡ್ಗೆ ಅಗತ್ಯ ವಾದ ಸ್ಥಳ ಲಭ್ಯತೆ ಇಲ್ಲದುದರಿಂದ ಮುಂದಿನ ಕ್ರಮಗಳು ವಿಳಂಬವಾ ಯಿತು.
ಅನಂತರ ಶಾಸಕ ಎಕೆಎಂ ಅಶ್ರಫ್, ಜನಪರ ಕ್ರಿಯಾ ಸಮಿತಿ ಹಾಗೂ ಕುಂಬಳೆ ಗ್ರಾಮ ಪಂಚಾ ಯತ್ ಸೇರಿ ಕಳೆದ ತಿಂಗಳು ಸ್ಥಳ ಲಭ್ಯತೆಯನ್ನು ಖಚಿತಪಡಿಸ ಲಾಗಿದೆ. ಇದರಿಂದ ಯೋಜನೆಗಿರುವ ಡಿಪಿಆರ್ ಸಿದ್ಧಪಡಿಸಲಾಗಿದೆ. ಈ ತಿಂಗಳಲ್ಲೇ ಡಿಪಿಆರ್ ನಬಾರ್ಡ್ಗೆ ಸಲ್ಲಿಸಲಾಗ ವುದು. ಅದಕ್ಕೆ ಅಂಗೀ ಕಾರ ಲಭಿಸಿದಲ್ಲಿ ಕಾಮಗಾರಿ ಆರಂಭಿ ಸಲಾಗುವುದೆಂದೂ ತಿಳಿಸಲಾಗಿದೆ.