ಕಂಚಿಕಟ್ಟೆ ಸೇತುವೆ ಮುಚ್ಚುಗಡೆ: ಯುಡಿಎಫ್‌ನಿಂದ 4ರಂದು ಕಲೆಕ್ಟರೇಟ್ ಧರಣಿ
ಕುಂಬಳೆ: ಕಂಚಿಕಟ್ಟೆ ಸೇತುವೆಯನ್ನು ಮುಚ್ಚುಗಡೆಗೊಳಿಸಿದ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ ಯುಡಿಎಫ್ ಕುಂಬಳೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಮೇ 4ರಂದು ಬೆಳಿಗ್ಗೆ 10 ಗಂಟೆಗೆ ಕಲೆಕ್ಟರೇಟ್ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಕುಂಬಳೆ ಲೀಗ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚೆಯರ್ ಮೆನ್ ಬಿ.ಎನ್. ಮುಹಮ್ಮದಲಿ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಜಿಲ್ಲಾ ಕಾರ್ಯದರ್ಶಿ ಎಂ. ಅಬ್ಬಾಸ್ ಉದ್ಘಾಟಿಸಿದರು. ಲೋಕನಾಥ ಶೆಟ್ಟಿ, ಮಂಡಲ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್, ಅಶ್ರಫ್ ಕಾರ್ಳೆ, ಲಕ್ಷ್ಮಣ ಪ್ರಭು. ನಾಸರ್ ಮೊಗ್ರಾಲ್, ಅಸೀಸ್ ಕಳತ್ತೂರು ಬಿ.ಎ. ರಹ್ಮಾನ್, ಅಶ್ರಫ್ ಕೊಡ್ಯಮ್ಮೆ, ಅಬ್ಬಾಸ್ ಕೊಡ್ಯಮ್ಮೆ, ಸಿದ್ದಿಕ್ ದಂಡೆಗೋಳಿ, ಮುಹಮ್ಮದ್ ಕುಂಞಿ ಆರಿಕ್ಕಾಡಿ, ಎ. ಮುಹಮ್ಮದ್ ರಫೀಕ್, ನೂರ್ ಜಮೀಲ್, ಕೆ.ಎಸ್. ಶಮೀರ್, ಅಬ್ದುಲ್ಲ ಕುಂಬಳೆ ಉಪಸ್ಥಿತರಿದ್ದರು.