ಕಂದಾಯ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಚಾಲನೆ
ಮುಳ್ಳೇರಿಯ: ಕಂದಾಯ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಇಂದು ಬೆಳಿಗ್ಗೆ ಧ್ವಜಾರೋಹಣ ದೊಂದಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ೪೧೧೨ ವಿದ್ಯಾರ್ಥಿಗಳು ೩೦೫ ವಿಭಾಗಗಳಲ್ಲಿ ಸ್ಪರ್ಧಿಸುವರು. ಯುಪಿ,ಎಚ್ಎಸ್, ಎಚ್ಎಸ್ಎಸ್ ಮಕ್ಕಳು ಇದರಲ್ಲಿ ಒಳಗೊಂ ಡಿದ್ದಾರೆ. ಇಂದು ಹಾಗೂ ನಾಳೆ ವೇದಿಕೇತರ ಸ್ಪರ್ಧೆಗಳು, ೭ರಿಂದ ೯ರವರೆಗೆ ವೇದಿಕೆ ಸ್ಪರ್ಧೆಗಳು ನಡೆಯಲಿದೆ. ಕನ್ನಡ ವಿಭಾಗದಲ್ಲಿ ೭ ವಿಭಾಗಗಳಿವೆ. ಇಂದು ೮ ವೇದಿಕೆಗಳಲ್ಲಿ ಹಾಗೂ ನಾಳೆ ಏಳು ವೇದಿಕೆಗಳಲ್ಲಿ ವೇದಿಕೇತರ ಸ್ಪರ್ಧೆಗಳು ನಡೆಯಲಿದೆ.
ಉಪಜಿಲ್ಲೆಗಳಿಂದ ೯೨ ವಿಭಾಗ ಗಳಲ್ಲಿ ಅಪೀಲು ನೀಡಿರುವುದರಲ್ಲಿ ೩೦೧ ಮಂದಿಗೆ ಸ್ಪರ್ಧಿಸಲು ಅವಕಾಶ ಲಭಿಸಿದೆ. ೭ರಂದು ಸಂಜೆ ವಿಧಾನಸಭೆ ಅಧ್ಯಕ್ಷ ಎ.ಎನ್. ಶಂಸೀರ್ ಉದ್ಘಾಟಿಸಲಿದ್ದು, ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಶಾಸಕರು, ಸ್ಥಳೀಯಜನಪ್ರತಿ qನಿಧಿಗಳು ಭಾಗವಹಿಸುವರು.
ಕಲೋತ್ಸವಕ್ಕೆ ತಲುಪುವ ಎಲ್ಲರಿಗೂ ಆಹಾರದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ವಿವಿಧ ಕಡೆಗಳಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆದಿದೆ. ಕೋಳಿಯಡ್ಕ, ನೆಚ್ಚಿಪಡ್ಪು, ಅಡ್ಕಂ, ಕರ್ಮಂತೋಡಿ, ಕೊಟ್ಟಂಗುಳಿ, ಹದಿಮೂರನೇ ಮೈಲು, ಎರಿಂಜೇರಿ, ಅಡ್ಕತ್ತೊಟ್ಟಿ, ಮೂಡಾಂಗುಳಂ ಮೊದಲಾದೆಡೆಗಳಿಂದ ಪ್ರಾದೇಶಿಕ ಸಮಿತಿ ನೇತೃತ್ವದಲ್ಲಿ ಹೊರೆಕಾಣಿಕೆ ಮೆರವಣಿಗೆ ನಡೆಸಲಾಗಿದೆ.