ಕಂದಾಯ ಜಿಲ್ಲಾ ಶಾಲಾ ಕ್ರೀಡೋತ್ಸವ: ಚಿತ್ತಾರಿಕ್ಕಲ್ ಉಪಜಿಲ್ಲೆ ಮುನ್ನಡೆಯಲ್ಲಿ ; ಕಾಸರಗೋಡು ತೃತೀಯ ಸ್ಥಾನದಲ್ಲಿ
ಕಾಸರಗೋಡು: ನೀಲೇಶ್ವರದಲ್ಲಿ ಆರಂಭಗೊAಡಿರುವ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕ್ರೀಡೋತ್ಸವ ಎರಡನೇ ದಿನವಾದ ನಿನ್ನೆ ಒಟ್ಟು 62 ವಿವಿಧ ಸ್ಪರ್ಧೆಗಳು ನಡೆದಿದ್ದು, ಅದರಲ್ಲಿ 19 ಚಿನ್ನ, ಎರಡು ಬೆಳ್ಳಿ ಹಾಗೂ 7 ಕಂಚಿನ ಪದಕದೊಂದಿಗೆ ಒಟ್ಟು 140 ಅಂಕಗಳೊAದಿಗೆ ಚಿತ್ತಾರಿಕ್ಕಲ್ ಉಪಜಿಲ್ಲೆ ಮುನ್ನಡೆ ಸಾಧಿಸಿದೆ.
ಇನ್ನು 13 ಚಿನ್ನ, 11 ಬೆಳ್ಳಿ ಮತ್ತು ಕಂಚಿನ ಪದಕ ಹಾಗೂ 111 ಅಂಕದೊAದಿಗೆ ಚೆರ್ವತ್ತೂರು ಉಪಜಿಲ್ಲಾ ದ್ವಿತೀಯ ಸ್ಥಾನದಲ್ಲಿದೆ. ಕಾಸರಗೋಡು ಶಿಕ್ಷಣ ಉಪಜಿಲ್ಲೆ 102 ಅಂಕಗಳೊAದಿಗೆ ತೃತೀಯ ಸ್ಥಾನದಲ್ಲಿದೆ. ಈ ಉಪಜಿಲ್ಲೆ 7 ಚಿನ್ನ, 12 ಬೆಳ್ಳಿ ಹಾಗೂ 16 ಕಂಚು ಗೆದ್ದುಕೊಂಡಿದೆ. ಇನ್ನು ಶಾಲೆಗಳ ಪೈಕಿ 7 ಚಿನ್ನ, ತಲಾ 2ರಂತೆ ಬೆಳ್ಳಿ ಮತ್ತು ಕಂಚಿನ ಪದಕಗಳೊಂದಿಗೆ ಜಿಎಚ್ ಎಸ್ಎಸ್ ಕುಟ್ಟಮತ್ 43 ಅಂಕಗಳೊAದಿಗೆ ಪ್ರಥಮ ಸ್ಥಾನದಲ್ಲಿದೆ. ತಲಾ 4ರಂತೆ ಚಿನ್ನ ಮತ್ತು ಬೆಳ್ಳಿ ಹಾಗೂ ಎರಡು ಕಂಚಿನೊAದಿಗೆ 34 ಅಂಕ ಪಡೆದ ಹೊಸದುರ್ಗ ದುರ್ಗಾ ಎಚ್ಎಸ್ಎಸ್ ದ್ವಿತೀಯ ಹಾಗೂ 3 ಚಿನ್ನ ಮತ್ತು 6 ಬೆಳ್ಳಿ ಪದಕಗ ಳೊಂದಿಗೆ 33 ಅಂಕಗಳೊAದಿಗೆ ಉಪ್ಪಳ ಜಿಎಚ್ಎಸ್ಎಸ್ ತೃತೀಯ ಸ್ಥಾನದಲ್ಲಿದೆ. ಹುಡುಗಿಯರ 400 ಮೀಟರ್ ರಿಲೇಯಲ್ಲಿ ಕಾಸರಗೋಡು ಉಪಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಡಿಸ್ಕಸ್ ತ್ರೋ ಜ್ಯೂನಿಯರ್ ವಿಭಾಗದಲ್ಲಿ ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಇಬ್ರಾಹಿಂ ಬಾತಿಶಾ ಒಂದನೇ ಸ್ಥಾನ ಪಡೆದಿದ್ದಾನೆ. ಉಪ್ಫಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ವನ್ ವಿದ್ಯಾರ್ಥಿ ಮೊಹಮ್ಮದ್ ಅನ್ಸಾದ್ ಪೋಲ್ ವಾಲ್ಟ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ. ಸೀನಿಯರ್ ಹುಡುಗರ 100 ಮತ್ತು 400 ಮೀಟರ್ ಓಟದಲ್ಲಿ ಪಟ್ಲ ಜಿಎಚ್ಎಸ್ನ ಅಬ್ದುಲ್ ಶೌನಿಸ್ ಪ್ರಥಮ ಸ್ಥಾನ ಪಡೆದಿದ್ದಾನೆ.