ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ನಾಳೆಯಿಂದ
ಪೆರ್ಮುದೆ: ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕುಂಭಾಭಿಷೇಕ, ಜಟಾಧಾರಿ ಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠಾಧಿ ಕಾರ್ಯಕ್ರಮಗಳು ನಾಳೆಯಿಂದ ಫೆಬ್ರವರಿ 4ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ನಾಳೆ ಬೆಳಿಗ್ಗೆ 8.30ಕ್ಕೆ ಉಗ್ರಾಣ ಮುಹೂರ್ತ, ಅಪರಾಹ್ನ 3ಗಂಟೆಗೆ ಹೊರೆಕಾಣಿಕೆ ಸಮರ್ಪಣೆ, 7 ಗಂಟೆಗೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ವಿವಿಧ ವೈದಿಕ ಕಾರ್ಯಕ್ರಮ ಗಳು, 29ರಂದು ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, ಕಲಶಾಭಿಷೇಕ ಮೊದಲಾದ ವೈದಿಕ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತ ರ್ಪಣೆ, ರಾತ್ರಿ 7ಕ್ಕೆ ಅಂಕುರಪೂಜೆ, ದುರ್ಗಾನಮಸ್ಕಾರ ಪೂಜೆ ನಡೆಯಲಿದೆ.
31ರಂದು ಬೆಳಿಗ್ಗೆ 5ರಿಂದ ಗಣಪತಿಹೋಮ, 6.58ರಿಂದ ಜಟಾಧಾರಿ ಹಾಗೂ ಪರಿವಾರ ಸಾನಿ ಧ್ಯಗಳ ಪುನರ್ ಪ್ರತಿಷ್ಠೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಫೆಬ್ರವರಿ 2ರಂದು ಮಧ್ಯಾಹ್ನ 12.51ಕ್ಕೆ ಬ್ರಹ್ಮಕುಂಭಾ ಭಿಷೇಕ, ರಾತ್ರಿ 7ಕ್ಕೆ ರಂಗಪೂಜೆ, ಶ್ರೀ ಭೂತಬಲಿ ಉತ್ಸವ ನಡೆಯಲಿದೆ. 4ರಂದು ಮುಂಜಾನೆ 3 ಗಂಟೆಗೆ ಜಟಾ ಧಾರಿ ದೈವದ ಮಹಿಮೆ ನಡೆಯಲಿದೆ. ನಾಳೆ ರಾತ್ರಿ 8ರಿಂದ ಭರತನಾಟ್ಯ ಹಾಗೂ ಶಾಸ್ತ್ರೀಯ ಸಂಗೀತ, 29ರಂದು ಬೆಳಿಗ್ಗೆ 10ಕ್ಕೆ ಹರಿಕೀರ್ತನೆ, ರಾತ್ರಿ 7ರಿಂದ ನೃತ್ಯ ವೈಭವ, ಬಳಿಕ ಶಾಸ್ತ್ರೀಯ ಸಂಗೀತ, ಮುಂದಿನ ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆ, ವೈದಿಕ ಕಾರ್ಯಕ್ರಮಗಳು ಜರಗಲಿದೆ.