ಕಚೇರಿಗೆ ನುಗ್ಗಿ ಯುವತಿಗೆ ಅವಮಾನ: ಆರೋಪಿ ಸೆರೆ
ಕಣ್ಣೂರು: ಕಚೇರಿಗೆ ನುಗ್ಗಿ ಯುವತಿಗೆ ಅವಮಾನ ಗೈಯ್ಯಲು ಯತ್ನಿಸಿದ ಆರೋಪದಂತೆ ಯುವಕನನ್ನು ತಳಿಪರಂಬ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಕೊಪ್ಪಟ್ ಗುಂಗೇರ ತೆಂಗುಂಟಿ ಎಂಬಲ್ಲಿನ ಮಲ್ಲಪ್ಪ ಯಾನೆ ಮಲ್ಲು (24) ಎಂಬಾತ ಬಂಧಿತ ವ್ಯಕ್ತಿ. ಈತ ಕಣ್ಣೂರು ಕುರುಮಾತೂರು ಚೊರ್ಕಳ ಎಂಬಲ್ಲಿ ಕಲ್ಲಿನ ಕೆಲಸ ನಿರ್ವಹಿಸುತ್ತಿದ್ದಾನೆ. ಈತ ಹಾಗೂ ಇತರ ಕೆಲಸಗಾರರು ಅಲ್ಲಿನ ಎರಡು ಮಹಡಿಯ ಕಟ್ಟಡದ ಮೇಲೆ ವಾಸಿಸುತ್ತಿದ್ದಾರೆ. ಇದೇ ಕಟ್ಟಡದ ಕೆಳ ಅಂತಸ್ತಿನಲ್ಲಿರುವ ಕಚೇರಿಗೆ ಈತ ನಿನ್ನೆ ನುಗ್ಗಿ ಅಲ್ಲಿನ ನೌಕರೆಯಾದ ಯುವತಿಯನ್ನು ಅವಮಾನಗೈಯ್ಯಲೆತ್ನಿಸಿರುವುದಾಗಿ ದೂರಲಾಗಿದೆ.