ಕಡಲ್ಕೊರೆತ: ಹನುಮಾನ್‌ನಗರ ಕಾಂಕ್ರೀಟ್ ರಸ್ತೆ ನೀರುಪಾಲು ಭೀತಿ
ಉಪ್ಪಳ: ಸಮುದ್ರ ತೀರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿ ಒಂದು ವರ್ಷ ಪೂರ್ತಿಯಾಗುವ ಮೊದಲೇ ರಸ್ತೆಯನ್ನು ಸಮುದ್ರ ನುಂಗುವ ಸ್ಥಿತಿ ಹನುಮಾನ್ ನಗರದಲ್ಲಿ ಉಂಟಾಗಿದೆ. ಹನುಮಾನ್ ನಗರದಿಂದ ಮಣಿಮುಂಡ ತನಕ ಹಾರ್ಬರ್ ನಿಧಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿತ್ತು. ಆದರೆ ಇದರಲ್ಲಿ ಈಗ ಸುಮಾರು ನೂರು ಮೀಟರ್ ರಸ್ತೆ ಅಪಾಯಕಾರಿಯಾಗಿದೆ. ಇದರಲ್ಲಿ ಸಂಚಾರ ಭೀತಿದಾಯಕವಾಗಿದೆ. ರಸ್ತೆಯನ್ನು ದುರಸ್ತಿಗೊಳಿಸಿ ಸ್ಥಳೀಯರ ಸಂಚಾರಕ್ಕೆ ಯೋಗ್ಯಗೊಳಿ ಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕೆಂದು ಬ್ಲೋಕ್ ಪಂ. ಸದಸ್ಯೆ, ಬಿಜೆಪಿ ಮುಖಂಡೆ ಎಂ.ಎಲ್. ಅಶ್ವಿನಿ ಆಗ್ರಹಿಸಿದರು. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಅವರು ಪಕ್ಷದ ಬೆಂಬಲದ ಭರವಸೆ ನೀಡಿ ಜಿಲ್ಲಾಧಿಕಾರಿ ಜೊತೆ ಮಾತನಾಡುವು ದಾಗಿ ತಿಳಿಸಿದರು. ಭೇಟಿ ನೀಡಿದ ತಂಡದಲ್ಲಿ ಮುಖಂ ಡರಾದ ಕೆ.ಪಿ. ವಲ್ಸರಾಜ್, ಜ್ಯೋತಿ ಕುಮಾರ್ ಐಲ, ಮಾಧವ, ಕಾರ್ಯಕರ್ತರು ಉಪಸ್ಥಿತರಿದ್ದರು.