ಕಡೆಂಕೋಡಿ ಕರಾವಳಿ ಫ್ರೆಂಡ್ಸ್ ಕ್ಲಬ್‌ನ ನೂತನ ಕಟ್ಟಡ ಉದ್ಘಾಟನೆ
ಉಪ್ಪಳ: ಪೈವಳಿಕೆ ಬಳಿಯ ಕಡೆಂಕೋಡಿ ಕರಾವಳಿ ಫ್ರೆಂಡ್ಸ್ ಕ್ಲಬ್‌ನ ನೂತನ ಕಟ್ಟಡದ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ ನಿರ್ವಹಿಸಿದರು. ವಾರ್ಡ್ ಸದಸ್ಯ ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದರು. ಕ್ಲಬ್ ಕಾರ್ಯದರ್ಶಿ ಹರೀಶ್ ಕುಮಾರ್ ಕೆ, ಅಧ್ಯಕ್ಷ ರಾಮಚಂದ್ರ ನಾಯ್ಕ, ಸೀತಾರಾಮ ಬೋಳಂಗಳ, ಮೊಹಮ್ಮದ್ ಅಲಿ ಕಡೆಂಕೋಡಿ, ಡಿ.ಎಂ. ಪ್ರಸಾದ್ ಕುಂಡೇರಿ ಮೊದಲಾದವರು ಉಪಸ್ಥಿತರಿದ್ದರು. ಕ್ಲಬ್‌ಗೆ ನಿರ್ಮಿಸಲು ಸ್ಥಳ ನೀಡಿದ ಪಾರ್ವತಿ ಕಡೆಂಕೋಡಿ ಅವರನ್ನು ಗೌರವಿಸಲಾಯಿತು.