ಕಣಗಿಲೆ ಹೂ ತಿಂದ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಕೊಚ್ಚಿ: ಕಣಗಿಲೆ ಹೂ ಸೇವಿಸಿ ದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರ್ನಾಕುಳಂ ಕೋಲಂಜೇರಿಯಲ್ಲಿ ಘಟನೆ ನಡೆದಿದೆ. ಕಡಇರುಪ್ಪ್ ಸರಕಾರಿ ಹೈಸ್ಕೂಲ್‌ನ ಇಬ್ಬರು ವಿದ್ಯಾರ್ಥಿ ಗಳನ್ನು ವಾಂತಿ, ತಲೆನೋವಿನ ಹಿನ್ನೆಲೆಯಲ್ಲಿ ಕೋಲಾಂಜೇರಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ. ಕಣಗಿಲೆ ಹೂ ತಿಂದಿರುವುದಾಗಿ ವಿದ್ಯಾರ್ಥಿಗಳು ವೈದ್ಯರಲ್ಲಿ ತಿಳಿಸಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇವರ ರಕ್ತದ ಸ್ಯಾಂಪಲ್ ತಜ್ಞತಪಾಸಣೆಗೆ ಕಳುಹಿಸಿಕೊಡಲಾಗಿದೆ. 24 ಗಂಟೆ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ತಿಂಗಳ ಹಿಂದೆ ಓರ್ವೆ ವಿದ್ಯಾರ್ಥಿನಿ ಕಣಗಿಲೆ ಹೂ ತಿಂದ ಕಾರಣ ಮೃತಪಟ್ಟ ಘಟನೆ ನಡೆದಿತ್ತು.

You cannot copy contents of this page