ಕಣಿಪುರ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ: ಕೊಂಡೆವೂರು ಸ್ವಾಮೀಜಿಯವರಿಂದ ಆಶೀರ್ವಚನ ಇಂದು
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲ ಶೋತ್ಸವ ಕಾರ್ಯಕ್ರಮಗಳು ಸಂಭ್ರಮ ದಿಂದ ಜರಗುತ್ತಿದ್ದು, ನಾಡಿನ ವಿವಿಧ ಭಾಗಗಳಿಂದ ಭಕ್ತ ಜನರು ಭಾರೀ ಸಂಖ್ಯೆ ಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿದಿನ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಇದರಂತೆ ಇಂದು ಬೆಳಿಗ್ಗೆ ಗಣಪತಿ ಹೋಮ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಒಳ ವೇದಿಕೆ ಯಲ್ಲಿ ಬೆಳಗ್ಗಿನಿಂದ ವಿವಿಧ ಭಜನಾ ಸಂಘಗಳಿಂದ ಭಜನಾ ಝೇಂಕಾರ್ ನಡೆಯುತ್ತಿದೆ. ಹೊರ ವೇದಿಕೆಯಲ್ಲಿ ಕೂಡಾ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯುತ್ತಿದ್ದು, ಮಧ್ಯಾಹ್ನ ೧.೩೦ಕ್ಕೆ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದವರಿಂದ ಯಕ್ಷಗಾನ ತಾಳ ಮದ್ದಳೆ ನಡೆಯಲಿದೆ. ಸಂಜೆ ೪ ಗಂಟೆಗೆ ಧಾರ್ಮಿಕ ಸಭೆ ನಡೆಯಲಿರುವುದು. ಇದರಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ವೇದ ಮೂರ್ತಿ ವಿದ್ವಾನ್ ಶ್ರೀ ವೆಂಕಟೇಶ್ವರ ಭಟ್ ಹಿರಣ್ಯ ಧಾರ್ಮಿಕ ಉಪನ್ಯಾಸ ನೀಡುವರು. ಕಣಿಪುರ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ, ಪ್ರಧಾನ ಅರ್ಚಕ ಮಾಧವ ಅಡಿಗ ಕುಂಬಳೆ, ಮಧೂರು ಉಳಿಯ ಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಬಂಬ್ರಾಣಬೂಡು ಶಂಕರನಾರಾಯಣ ಕಡಮಣ್ಣಾಯ, ಯೋಗೀಶ ಕಡಮ ಣ್ಣಾಯ ಆರಿಕ್ಕಾಡಿ ಉಪಸ್ಥಿತರಿರುವರು. ಸಂಸದ ನಳಿನ್ ಕುಮಾರ್ ಕಟೀಲು, ಕರ್ನಾಟಕ ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್ ಬಂಟ್ವಾಳ, ಭರತ್ ಶೆಟ್ಟಿ, ಅಶೋಕ ರೈ, ಕಾರವಾರ ಜೆಎಂಎಫ್ಸಿ ಸಿವಿಲ್ ಜಡ್ಜ್ ಧನರಾಜ್ ಎಸ್.ಎಂ, ಜಿಲ್ಲಾಧಿಕಾರಿ ಇಂಬಶೇಖರ್, ಮಾಜಿ ಶಾಸಕ ರಮಾನಾಥ ರೈ, ದ.ಕ. ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಲಬಾರ್ ದೇವಸ್ವಂ ಮಂಡಳಿ ಏರಿಯಾ ಸಮಿತಿ ಸದಸ್ಯ ಶಂಕರ ರೈ ಮಾಸ್ತರ್, ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಕಣ್ಣೂರು ರೂರಲ್ ಅಡಿಶನಲ್ ಎಸ್ಪಿ. ಟಿ.ಪಿ. ರಂಜಿತ್, ಉದ್ಯಮಿ ಕೆ.ಪಿ. ರೈ ಕುತ್ತಿಕ್ಕಾರ್, ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು, ಸಮಾಜಸೇವಕ ಹರೀಶ್ ಶೆಟ್ಟಿ ಮಾಡ, ಕಾರಿಂಜೆ ಶ್ರೀ ಮಹಾದೇವ ದೇವಸ್ಥಾ ನದ ಆಡಳಿತ ಮೊಕ್ತೇಸರ ಬ್ರಿಗೇಡಿಯರ್ ನಾಞಪ್ಪ ರೈ ಇಚ್ಲಂಪಾಡಿ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿರುವರು. ಇದೇ ಸಂದರ್ಭದಲ್ಲಿ ವ್ಯಾಪಾರಿ ಜಿ.ಡಿ. ನರಸಿಂಹ ನಾಯಕ್ ಕುಂಬಳೆ, ಉದ್ಯಮಿ ರಾಯ ಪ್ರಭು ಸುಳ್ಯ, ಮನೋಜ್ ಅಗರ್ವಾಲ್ ಜೈಪುರ, ಕೆ. ವಿಶ್ವನಾಥ ನಾಯಕ್ ಕುಂಬಳೆ, ದಾಮೋದರ ಭಟ್ ಕುಂಬಳೆ, ಜನಾರ್ದನ ಕಾಮತ್ ಕುಂಬಳೆ, ನಾರಾಯಣ ಗಟ್ಟಿ ಮಾಸ್ಟರ್ ಮಳಿ ಕುಂಬಳೆ, ರಾಮಚಂದ್ರಗಟ್ಟಿ ಮಳಿ ಕುಂಬಳೆ, ವಿಠಲ ಆಚಾರ್ಯ ಕೃಷ್ಣನಗರ ಕುಂಬಳೆ, ಪದ್ಮನಾಭ ಶೆಟ್ಟಿ ಮಡ್ವ, ವಿದ್ಯಾರತ್ನ ಕುಂಬಳೆ ಎಂಬಿವರನ್ನು ಸನ್ಮಾನಿಸಲಾಗುವುದು. ನಾಳೆ ಬೆಳಿಗ್ಗೆ ೬ರಿಂದ ವಿವಿಧ ವೈದಿಕ ಕಾರ್ಯಕ್ರಮ, ಒಳವೇದಿಕೆಯಲ್ಲಿ ವಿವಿಧ ಭಜನಾ ಸಂಘಗಳಿಂದ ಭಜನಾ ಝೇಂಕಾರ್, ಮಧ್ಯಾಹ್ನ ೧೨ ಗಂಟೆಗೆ ಎನ್. ಕಾವ್ಯ ಶ್ರೀ ಭಟ್ ನಿಡುಗಳ ಅವರಿಂದ ಶಾಸ್ತ್ರೀ ಯ ಸಂಗೀತ, ಹೊರ ವೇದಿಕೆಯಲ್ಲಿ ಬೆಳಿಗ್ಗೆ ೧೦ರಿಂದ ದುರ್ಗಾಶಂಕರ ಅಡಿಗ ಶೇಡಿಕಾವು ಅವರಿಂದ ಏಕಪಾತ್ರಾಭಿನ ಯ- ‘ನರಸಿಂಹಾವತಾರ’, ೧೦.೩೦ ರಿಂದ ಕೀರ್ತನ ಕುಟೀರ ಕುಂಬಳೆ ಇವರಿಂದ ಹರಿಕಥಾ ಭಾವವೈಭವ, ೧೧.೩೦ರಿಂದ ಅನ್ನದಾಸೋಹಂ, ೧೨.೩೦ರಿಂದ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದಿಂದ ದಾಸಗಾನ ಮಂಜರಿ, ಸಂಜೆ ೬ರಿಂದ ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ ಮಂಜ ನಾಡಿ ಇವರಿಂದ ಮಕ್ಕಳ ಯಕ್ಷಗಾನ ಬಯಲಾಟ- ನೃತ್ಯದರ್ಶನ, ರಾತ್ರಿ ೮ರಿಂದ ನಾಟ್ಯ ನಿಲಯಂ ಮಂಜೇ ಶ್ವರ ಇದರ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯರಿಂದ ನೃತ್ಯ ಸಂಕಲ್ಪಂ ನಡೆಯಲಿದೆ.