ಕಣ್ಣೂರು-ಕೊಡಗು ಗಡಿಯಲ್ಲಿ ಪೊಲೀಸ್ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ

ಕಣ್ಣೂರು: ಕೇರಳ ಕರ್ನಾಟಕದ ಕಣ್ಣೂರು ಕೊಡಗು ಗಡಿ ಪ್ರದೇಶದಲ್ಲಿ ಕೇರಳ ನಕ್ಸಲ್ ನಿಗ್ರಹಪಡೆ (ತಂಡರ್ ಬೋಲ್ಟ್) ಮತ್ತು ನಕ್ಸಲರ ನಡುವೆ ನಿನ್ನೆ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಅದರಲ್ಲಿ ಓರ್ವ ನಕ್ಸಲ್ ಗಾಯಗೊಂ ಡಿದ್ದಾನೆ. ಆ ವೇಳೆ ನಕ್ಸಲ್ ಗುಂಪಿಗೆ ಸೇರಿದ ಆಂಧ್ರಪ್ರದೇಶದ  ಲತ ಮತ್ತು ತಮಿಳುನಾಡಿನವಳೆಂದು ಹೇಳಲಾಗುತ್ತಿರುವ ವನಜಾಕ್ಷಿ ಎಂಬವರು ತಪ್ಪಿಸಿಕೊಂಡಿದ್ದಾರೆ. ಅರಣ್ಯದಿಂದ ತಪ್ಪಿಸಿಕೊಂಡ ಈ ಇಬ್ಬರು ಬಸ್‌ನಲ್ಲಿ  ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ರೈಲಿನಲ್ಲಿ ಪ್ರಯಾಣಿಸುವ ಸಾಧ್ಯತೆಯಿದೆಯೆಂಬ ಮಾಹಿತಿ ಪೊಲೀಸರಿಗೆ ಲಭಿಸಿದ್ದು ಅದರಿಂದ ಅವರ ಪತ್ತೆಗಾಗಿ ಕಾಸರಗೋಡು   ಸೇರಿದಂತೆ ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಎಲ್ಲಾ ರೈಲುಗಳನ್ನು ಪೊಲೀಸರು ಬಿಗಿ ತಪಾಸಣೆಗೊಳಪಡಿಸತೊಡಗಿದ್ದಾರೆ. ಮಾತ್ರವಲ್ಲ ಕಣ್ಣೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ಕರ್ನಾಟಕ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಮೂರು ರೈಫಲ್‌ಗಳು, ಒಂದು ಲ್ಯಾಪ್‌ಟಾಪ್, ನಾಲ್ಕು ಮೊಬೈ ಲ್ ಫೋನ್‌ಗಳು ಹಾಗೂ ಎರಡು ಟೆಂಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.  ಈ ಸ್ಥಳದಲ್ಲಿ ೯ ನಕ್ಸಲರು ಇದ್ದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಪರಾರಿಯಾದವರು ನಕ್ಸಲ್‌ನ ಕಬಿನಿ ದಳದವರಾಗಿದ್ದಾರೆ. ಈ ದಳದ ಮುಖಂಡ ಮೊಯ್ದೀನ್  ಎಂಬಾತನ ನೇತೃತ್ವದ ಕಣ್ಣೂರು-ಕೊಡಗು ಗಡಿಭಾಗದ  ಶಿಬಿರದಲ್ಲಿ ತಂಗಿದ್ದರೆಂಬ ಸ್ಪಷ್ಟ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಇದರಿಂದಾಗಿ ನಕ್ಸಲ್ ನಿಗ್ರಹಪಡೆ ಕೊಡಗು ಮತ್ತು ಕಣ್ಣೂರು ಗಡಿಪ್ರದೇಶದ ದಟ್ಟಾರಣ್ಯಗಳಲ್ಲಿ ಕೊಂಬಿಂಗ್ ಕಾರ್ಯಾಚರಣೆ ಯನ್ನು ಇನ್ನಷ್ಟು ತೀವ್ರಗೊಳಿಸಿದೆ. ಹೆಚ್ಚುವರಿ ಪೊಲೀಸ್ ಪಡೆಗಳನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page