ಕಣ್ಣೂರು ಬಳಿ ಒಂಭತ್ತು ಮಂದಿ ಮಾವೋವಾದಿಗಳು ಬಂದೂಕು ಸಹಿತ ಪತ್ತೆ: ಪೊಲೀಸರಿಂದ ತೀವ್ರ ಕಾರ್ಯಾಚರಣೆ
ಕಣ್ಣೂರು: ವಯನಾಡ್ ಮಾನಂತವಾಡಿಯ ದಟ್ಟಾರಣ್ಯದಿಂದ ಇಬ್ಬರು ಮಾವೋವಾದಿಗಳನ್ನು ಇತ್ತೀಚೆಗೆ ಸೆರೆಹಿಡಿದ ಬೆನ್ನಲ್ಲೇ ಒಂಭತ್ತು ಮಂದಿಯನ್ನೊಳಗೊಂಡ ಮಾವೋವಾದಿ ತಂಡ ಕಣ್ಣೂರು ಬಳಿ ತಲುಪಿರುವುದಾಗಿ ಸೂಚನೆ ಲಭಿಸಿದೆ.
ಕಣ್ಣೂರು ಸಮೀಪ ಕರಿಕೋ ಟಕಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ೮ ಗಂಟೆ ವೇಳೆ ಮಹಿಳೆ ಯರನ್ನೊಳಗೊಂಡ ಮಾವೋವಾದಿ ತಂಡ ಕಾಣಿಸಿಕೊಂಡಿದೆ. ಬಂದೂಕು ಧಾರಿಗಳಾದ ಈ ತಂಡ ಸ್ಥಳೀಯ ಮೂರು ಮನೆಗಳಿಗೆ ತೆರಳಿದೆ. ಜಯಪಾಲನ್, ಜೋಸ್, ಬೇಬಿ ಎಂಬಿವರ ಮನೆಗಳಿಗೆ ಮಾವೋ ವಾದಿಗಳು ತಲುಪಿದ್ದು, ಆಹಾರ ಸಾಮಗ್ರಿಗಳನ್ನು ನೀಡುವಂತೆ ಆಗ್ರಹಿಸಿದೆ. ಆದರೆ ಬಂದಿರುವುದು ಮಾವೋವಾದಿಗಳೆಂದು ತಿಳಿದ ಎರಡು ಮನೆಗಳಿಂದ ಆಹಾರ ಸಾಮಗ್ರಿ ನೀಡಲು ಹಿಂಜರಿದಿದ್ದಾರೆ. ಒಂದು ಮನೆಯಿಂದ ಅಕ್ಕಿ ಮತ್ತಿತರ ಆಹಾರ ವಸ್ತುಗಳನ್ನು ಪಡೆದು ಕೊಂಡು ತಂಡ ಮರಳಿದೆ. ತಂಡ ಮರಳಿದ ಬಳಿಕ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಮಾವೋವಾದಿಗಳು ಬಂದೂಕು ಸಹಿತ ತಲುಪಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರ ವಿಶೇಷ ತಂಡವಾದ ತಂಡರ್ ಬೋಲ್ಟ್ ಪಡೆ ಸ್ಥಳಕ್ಕೆ ತಲುಪಲಿದೆಯೆಂದು ತಿಳಿದುಬಂದಿದೆ.
ಈತಿಂಗಳ ೭ರಂದು ಮಾನಂತ ವಾಡಿ ಪೇರಿಯ ಚಿಪ್ಪಾರಂನ ದಟ್ಟಾರಣ್ಯದಲ್ಲಿ ಮಾವೋವಾದಿಗಳ ಪತ್ತೆಗಾಗಿ ತಂಡರ್ ಬೋಲ್ಟ್ ಕಾರ್ಯಾಚರಣೆ ನಡೆಸುತ್ತಿದ್ದಂತೆ ಮಾವೋವಾದಿಗಳು ಗುಂಡು ಹಾರಿಸಿದ್ದಾರೆ. ತಂಡರ್ ಬೋಲ್ಟ್ ಪಡೆ ಕೂಡಾ ತಿರುಗೇಟು ನೀಡಿದ್ದು, ಈ ವೇಳೆ ಓರ್ವ ಮಾವೋವಾದಿ ಗಾಯಗೊಂಡಿದ್ದನ.
ಇದೇ ವೇಳೆ ಮಾವೋವಾದಿ ತಂಡದ ಚಂದ್ರ ಹಾಗೂ ಉಣ್ಣಿ ಮಾಯ ಎಂಬಿವರನ್ನು ಪೊಲೀಸರು ಸೆರೆಹಿಡಿದಿದ್ದರು. ಈ ವೇಳೆ ಇತರ ಮಾವೋವಾದಿಗಳು ಪರಾರಿಯಾಗಿ ದ್ದರು. ಪರಾರಿಯಾದ ಮಾವೋವಾದಿ ಗಳಿಗಾಗಿ ಒಂದೆಡೆ ಶೋಧ ಮುಂದು ವರಿಯುತ್ತಿರುವಂತೆ ನಿನ್ನೆ ರಾತ್ರಿ ಕಣ್ಣೂರು ಸಮೀಪದಲ್ಲಿ ಮಾವೋ ವಾದಿಗಳು ಕಂಡುಬಂದಿದ್ದಾರೆ.