ಕಣ್ಣೂರು ವಿ.ವಿ. ಕಲೋತ್ಸವ ಬ್ರೆನ್ನನ್ ಕಾಲೇಜು ಮುನ್ನಡೆಯಲ್ಲಿ
ಮುನ್ನಾಡ್: ಮುನ್ನಾಡ್ ಪೀಪಲ್ಸ್ ಕಾಲೇಜಿನಲ್ಲಿ ನಿನ್ನೆ ಆರಂಭಗೊಂಡ ಕಣ್ಣೂರು ವಿಶ್ವವಿದ್ಯಾಲಯದ ಯೂನಿಯನ್ ಕಲೋತ್ಸವ ಮೊದಲನೆ ದಿನದ ಸ್ಪರ್ಧೆಗಳಲ್ಲಿ ತಲಶ್ಶೇರಿ ಬ್ರೆನ್ನನ್ ಕಾಲೇಜು ಮುನ್ನಡೆ ಸಾಧಿಸಿದೆ. ಕಾಸರಗೋಡು ಸರಕಾರಿ ಕಾಲೇಜು ಹಾಗೂ ಪಯ್ಯನ್ನೂರು ಕಾಲೇಜು ನಂತರದ ಸ್ಥಾನದಲ್ಲಿವೆ. ನಿನ್ನೆ ಆರಂಭಗೊಂಡ ವೇದಿಕೇತರ ಸ್ಪರ್ಧೆಗಳನ್ನು ನಿರೂಪಕರಾದ ಇ.ಪಿ. ರಾಜಗೋಪಾಲನ್ ಉದ್ಘಾಟಿಸಿದರು. ಸಾಹಿತಿ ಪಿ.ವಿ ಶಾಜಿ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಯೂನಿಯನ್ ಅದಕ್ಕೆ ಟಿ.ಪಿ. ಅಖಿಲ ಅಧ್ಯಕ್ಷತೆ ವಹಿಸಿದರು. ಈ ಕಲೋತ್ಸವವನ್ನು ರಾಜ್ಯ ವಿಧಾನಸಭಾ ಅಧ್ಯಕ್ಷ ಎ.ಎನ್. ಶಂಶೀರ್ ಇಂದು ಉದ್ಘಾಟಿಸುವರು.