ಕದ್ದ ಬೈಕ್ನಲ್ಲಿ ಹೆಲ್ಮೆಟ್ ಧರಿಸದೆ ಸವಾರಿ ನಡೆಸಿದ ಕಳ್ಳ ಜುಲ್ಮಾನೆ ಪಾವತಿಸಲು ಬೈಕ್ ಮಾಲಕನಿಗೆ ನೋಟೀಸು
ಕಾಸರಗೋಡು: ಕಳವುಗೈಯ್ಯ ಲಾದ ಬುಲ್ಲೆಟ್ ಬೈಕ್ನಲ್ಲಿ ಕಳ್ಳ ಸವಾರಿ ನಡೆಸಿದ್ದು, ಆದರೆ ಅದರ ಹೆಸರಲ್ಲಿ ಬೈಕ್ ಮಾಲಕನಿಗೆ ಜುಲ್ಮಾನೆ ಪಾವತಿಸುವಂತೆ ಮೋಟಾರು ವಾಹನ ಇಲಾಖೆ ನೋಟೀಸು ಜ್ಯಾರಿಗೊಳಿಸಿದೆ.
ಕಳವುಗೈಯ್ಯಲ್ಪಟ್ಟ ಬೈಕ್ ಮಾಲಕ ಪಳ್ಳಿಕ್ಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಕುಮಾರರಿಗೆ ಈ ನೋಟೀಸು ಜ್ಯಾರಿಗೊಳಿಸಲಾಗಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ ತಪ್ಪಿಗಾಗಿ ೧೦೦೦ ರೂ. ಜುಲ್ಮಾನೆ ಪಾವತಿಸುವಂತೆ ನೋಟೀಸಿನಲ್ಲಿ ತಿಳಿಸಲಾಗಿದೆ.
ಕಳೆದ ಡಿಸೆಂಬರ್ ೨೯ರಂದು ಪಳ್ಳಿಕ್ಕೆರೆ ಗ್ರಾಮ ಪಂಚಾಯತ್ ಕಚೇರಿ ಪರಿಸರದಲ್ಲಿ ನಿಲ್ಲಿಸಲಾಗಿದ್ದ ಕುಮಾರನ್ರ ಬೈಕ್ ಕಳವುಗೈಯ್ಯ ಲ್ಪಟ್ಟಿತ್ತು. ಕದ್ದ ಬೈಕ್ನ್ನು ಬೇಕಲ ಪೊಲೀಸರು ಬಳಿಕ ಕರ್ನಾಟಕದ ಶಿವಮೊಗ್ಗದಿಂದ ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದರು. ವಶಪಡಿಸಿಕೊಂಡ ಬೈಕನ್ನು ಬಳಿಕ ಪೊಲೀಸರು ನ್ಯಾಯಾಲಯದಲ್ಲಿ ಹಾಜರುಪಡಿ ಸಿದ್ದರು. ನಂತರ ಬೈಕ್ನ್ನು ನ್ಯಾಯಾಲ ಯದ ಅನುಮತಿ ಪ್ರಕಾರ ಅದರ ಮಾಲಕನಿಗೆ ಬಿಟ್ಟುಕೊಡಲಾಗಿತ್ತು. ಇದೆಲ್ಲಾ ಆದ ಎರಡು ತಿಂಗಳ ಬಳಿಕ ಅದರ ಮಾಲಕನಿಗೆ ಈಗ ಮೋಟಾರು ವಾಹನ ಇಲಾಖೆಯ ಈ ನೋಟೀಸು ಲಭಿಸಿದೆ.