ಕನಿಲ ಶ್ರೀ ಭಗವತೀ ಕ್ಷೇತ್ರದ ನೂತನ ಧ್ವಜಸ್ತಂಭಕ್ಕೆ ಮರ ಮುಹೂರ್ತ, ಶೋಭಾಯಾತ್ರೆ 5ರಂದು
ಮಂಜೇಶ್ವರ: ಪುನರ್ ನಿರ್ಮಾಣ ಗೊಳ್ಳುತ್ತಿರುವ ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದ ನೂತನ ಧ್ವಜ ಸ್ತಂಭಕ್ಕೆ ಮರ ಮುಹೂರ್ತ ಹಾಗೂ ಶೋಭಾ ಯಾತ್ರೆ ಜುಲೈ 5ರಂದು ನಡೆಯಲಿದೆ. ಪುತ್ತೂರಿನ ಪೋಳ್ಯ ಮಠದ ಬಳಿಯಿರುವ ಮುಳಿಯ ಶ್ರೀನಿವಾಸ್ ಲೇಔಟ್‌ನ ಕೃಷ್ಣ ನಾರಾಯಣ ಮುಳಿಯ ರವರ ಜಾಗದಲ್ಲಿರುವ ಸಾಗುವಾನಿ ಮರವನ್ನು ಧ್ವಜಸ್ತಂಭಕ್ಕೆ ಗುರುತಿಸಲಾಗಿದೆ. ಅಂದು ಬೆಳಿಗ್ಗೆ 10.30ರಿಂದ ಮರ ತರಲÁಗುವುದು. ಸಂಜೆ ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ದೈವಸ್ಥಾನದ ವಠಾರದಿಂದ ಚೆಂಡೆ, ವಾದ್ಯ, ಘೋಷಗಳೊಂದಿಗೆ ಮರವನ್ನು ಕನಿಲ ಶ್ರೀ ಭಗವತೀ ಕ್ಷೇತ್ರಕ್ಕೆ ಶೋಭಾಯಾತ್ರೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಜೀರ್ಣೋದ್ದಾರ ಮತ್ತು ಆಡಳಿತ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.