ಕನಿಲ ಶ್ರೀ ಭಗವತೀ ಕ್ಷೇತ್ರ ಪುನರ್ನಿರ್ಮಾಣ, ಸುತ್ತುಗೋಪುರದ ಭೂಮಿಪೂಜೆ
ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರ ಪುನರ್ ನಿರ್ಮಾಣ ಹಾಗೂ ಸುತ್ತು ಗೋಪುರದ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು. ಹಿರಿಯ ಭಗವತೀ ಕ್ಷೇತ್ರದ ಶಿಲಾನ್ಯಾಸವನ್ನು ಶ್ರೀ ಕ್ಷೇತ್ರದ ಮಂಜಪ್ಪ ಕಾರ್ನವರು, ಎಳೆಯ ಭಗವತೀ ಕ್ಷೇತ್ರದ ಶಿಲಾನ್ಯಾ¸ Àವನ್ನು ಮಂಗಳೂರು ಉದ್ಯಮಿ ಗಣೇಶ್ ಬಜಾಲ್, ದಂಡ ಕೊಟ್ಲು ಶಿಲಾನ್ಯಾಸವನ್ನು ಮಲ್ಪೆ ಉದ್ಯಮಿ ಪಿ.ಜನಾದÀðನ, ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಶಿಲಾನ್ಯಾಸವನ್ನು ಉದ್ಯಮಿ ಗೋಕುಲ್‌ದಾಸ್ ಬಂದ್ಯೋಡು, ಬಡಗು ಗೋಪುರದ ಶಿಲಾನ್ಯಾಸವನ್ನು ಉದ್ಯಮಿ ಪುರುಷೋತ್ತಮ ಪಾವೂರು ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪದ್ಮನಾಭ ಕಡಪ್ಪರ ಅಧ್ಯಕ್ಷತೆ ವಹಿಸಿದರು. ಕ್ಷೇತ್ರದ ಮಂಜಪ್ಪ ಕಾರ್ನವ, ಸಸಿಹಿತ್ಲು ಶ್ರೀ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಯಾನೆ ಅಪುö್ಪ ಪೂಜಾರಿ, ಶ್ರೀ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಕುದುರು, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಬಜಾಲ್, ಉದ್ಯಮಿ ಗೋಕುಲ್‌ದಾಸ್ ಬಂದ್ಯೋಡು, ಗೌರವಾಧ್ಯಕ್ಷ ಪಿ.ಜನಾರ್ಧನ, ಉದ್ಯಮಿ ಪುರುಷೋತ್ತಮ ಪಾವೂರು, ವಿವಿಧ ಕ್ಷೇತ್ರದ ಪದಾಧಿಕಾರಿಗಳಾದ ವಾಮನ ಇಡ್ಯ, ಗಣೇಶ ಕುಂಟಲ್ಪಾಡಿ, ಚಿದಾನಂದ ಗುರಿಕಾರ ನಂದ್ಯ, ಜಯರಾಮ ಬಲ್ಲಂಗುಡೇಲು, ಸುಕುಮಾರ ಉಪ್ಪಳ, ಕೃಷ್ಣ.ಪಿ ಅಡ್ಕ, ವಿಮಲ ನಾರಾಯಣ, ಮೋತಿ ಕಿರಣ್, ಸದಾಶಿವ ಉಳ್ಳಾಲ್, ರಾಮಪ್ಪ ಚೆನ್ನೆöÊ, ಜಯಂತ ಶೆಟ್ಟಿ ಕನಿಲಗುತ್ತು, ಶಿವಪ್ರಸಾದ್ ಕಟ್ಟೆಬಜಾರ್, ಬಿ.ಎಂ. ವಿಶ್ವನಾಥ್, ಗಣೇಶ್, ಕಿಶೋರ್ ಕುಮಾರ್ ಶೆಟ್ಟಿ ಬಂದ್ಯೋಡು ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನವೀನ್‌ರಾಜ್ ಕೆ.ಜೆ ಸ್ವಾಗತಿಸಿ, ಕೋಶಾಧಿಕಾರಿ ಲಕ್ಷ÷್ಮಣ್ ಟಿ ಸಾಲ್ಯಾನ್ ವಂದಿಸಿದರು. ದಿನಕರ ಬಿ.ಎಂ ಹೊಸಂಗಡಿ ನಿರೂಪಿಸಿದರು.