ಕನ್ನಡ ಅಧ್ಯಾಪಕರ ನೇಮಕ ಆಗ್ರಹ ಆಡಳಿತ ಭಾಷಾ ಅಭಿವೃದ್ಧಿ ಸಮಿತಿಯಿಂದ ಎಇಒ ಕಚೇರಿ ಧರಣಿ
ಮಂಜೇಶ್ವರ: ತಾಲೂಕು ಆಡಳಿತ ಭಾಷೆ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಎಇಒ ಕಚೇರಿ ಧರಣಿ ನಡೆಸಲಾಯಿತು. ೮೫ ಕನ್ನಡ ವಿದ್ಯಾಲಯಗಳಲ್ಲಿ ಅಧ್ಯಾಪಕರನ್ನು ನೇಮಕ ಮಾಡಬೇಕು, ಪಠ್ಯ ಪುಸ್ತಕ ತಲುಪಿಸಬೇಕು ಮೊದಲಾದ ಬೇಡಿಕೆ ಮುಂದಿಟ್ಟು ಧರಣಿ ನಡೆಸಲಾಗಿದೆ. ಕೂಕಲ್ ಬಾಲಕೃಷ್ಣನ್ ಉದ್ಘಾಟಿಸಿದರು. ಎಂ.ಕೆ. ಅಲಿ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಕೆಎಟಿಎಫ್ ರಾಜ್ಯ ಕಾರ್ಯದರ್ಶಿ ಯಾಹ್ಯ, ಕೆಎಸ್ಟಿಎ ಮಂಜೇಶ್ವರ ಅಧ್ಯಕ್ಷ ಬೆನ್ನಿ, ಮುಸ್ತಫ ಕಡಂಬಾರ್, ಮುಸ್ತಫ ಬಿ.ಎಂ. ಅಶ್ರಫ್ ಬಡಾಜೆ, ಯೂಸಫ್ ಪಚ್ಲಂಪಾರೆ, ಮಾಧವ ಬಲ್ಯಾಯ ಕುಂಜತ್ತೂರು, ಯು.ಎ. ಖಾದರ್, ಝೆಡ್ ಎ ಮೊಗ್ರಾಲ್, ಸತ್ಯನ್ ಸಿ. ಉಪ್ಪಳ, ಮಹಮ್ಮೂದ್ ಕೈಕಂಬ, ರಶೀದ್, ನ್ಯಾಯವಾದಿ ಕರೀಂ ಪೂನ, ಇಬ್ರಾಹಿಂ ಪೆರಿಂಗಡಿ, ಶಾಹುಲ್ ಹಮೀದ್, ವಿನಾಯಕ, ಹಮೀದ್ ಮಾತನಾಡಿದರು.