ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಮಲೆಯಾಳಂ ಪ್ರಬಂಧದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಮಟ್ಟದ ಕಲೋತ್ಸವ ದಲ್ಲಿ ಮಂಜೇಶ್ವರದ ಎಸ್.ಎ.ಟಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಪೂಜಲಕ್ಷ್ಮಿ, ಮಲೆಯಾಳಂ ಪ್ರಬಂಧದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಳು . ಮಾತೃ ಭಾಷೆ ತುಳುವಾಗಿದ್ದು, ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಮಲೆಯಾಳಂ ಪ್ರಬಂಧದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈ ಹಿಂದೆಯೂ ಅನೇಕ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದು ವಿಧ್ಯಾರ್ಥಿಗಳಿಗೆ ಮಾದರಿ ಯಾಗಿದ್ದಾಳೆ. ಸುಂಕದಕಟ್ಟೆಯ ಸುಕುಮಾರ ಮತ್ತು ಜಯ ಪಿಕೆ ದಂಪತಿ ಪುತ್ರಿಯಾಗಿದ್ದಾಳೆ.

Leave a Reply

Your email address will not be published. Required fields are marked *

You cannot copy content of this page