ಕನ್ನಡ ಹೋರಾಟಗಾರ ಅಡೂರು ಉಮೇಶ್ ನಾಯ್ಕ್‌ರ ಪತ್ನಿ ನಿಧನ

ಕಾಸರಗೋಡು: ಹಿರಿಯ ನ್ಯಾಯವಾದಿ, ಕನ್ನಡಪರ ಹೋರಾಟಗಾರ ಅಡೂರು ಉಮೇಶ್ ನಾಯ್ಕ್‌ರ ಪತ್ನಿ ಲಲಿತ ಅಡೂರು (88) ನಿಧನ ಹೊಂದಿದರು. ಇವರು ಕನ್ನಡ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಹಾಗೂ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ವಿದ್ಯಾನಗರ ನೆಲ್ಕಳದಲ್ಲಿನ ಮನೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತಿ, ಮಕ್ಕಳಾದ ಅಶೋಕ್ ಅಮೈ, ವಿದ್ಯಾಸಾಗರ್ ಅಮೈ, ಜ್ಯೋತಿ, ಅಳಿಯ ವಿಜಯ ನಾಯ್ಕ್ (ಬಹರೈನ್), ಸೊಸೆಯಂದಿರಾದ ಶಕಿಲ, ನಯನ ನಾಯ್ಕ್, ಸಹೋದರರಾದ ಪುರಂದರ ನಾಯ್ಕ್, ಗೋಕುಲ ನಾಯ್ಕ್, ನಟರಾಜ ನಾಯ್ಕ್, ಹರೀಶ ನಾಯ್ಕ್, ಸಹೋದರಿಯರಾದ ಸುಮತಿ ನಾಯ್ಕ್, ಪ್ರಪುಲ್ಲ ನಾಯ್ಕ್, ಪದ್ಮನಯನ ನಾಯ್ಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸದಸ್ಯರು ಸಂತಾಪ ಸೂಚಿಸಿದ್ದಾರೆ.

RELATED NEWS

You cannot copy contents of this page