ಕಯ್ಯಾರು ಶಾಲೆಯ ನೂತನ ಕಟ್ಟಡ, ಪಾಕಶಾಲೆ ಉದ್ಘಾಟನೆ
ಉಪ್ಪಳ: ಶ್ರೀ ರಾಮಕೃಷ್ಣ ಅನುದಾ ನಿತ ಕಿರಿಯ ಪ್ರಾಥಮಿಕ ಶಾಲೆ ಕಯ್ಯಾರು, ಶ್ರೀ ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್ ಆಧೀನ ಸಂಸ್ಥೆಗೆ ಕರ್ನಾಟಕ ಗಡಿ ಅಭಿ ವೃದ್ಧಿ ಪ್ರಾಧಿಕಾರದ ಅನುದಾನದಿಂದ ನಿರ್ಮಿಸಿದ ನೂತನ ಶಾಲಾ ಕಟ್ಟಡ ಮತ್ತು ಪ್ರಧಾನ ಮಂತ್ರಿ ಪೋಷಕ ಆಹಾರ ಯೋಜನೆಯ ಕೇರಳ ಸರಕಾರ ಬಿಡುಗಡೆ ಮಾಡಿದ ಪಾಕಶಾಲೆ ಹಾಗೂ ದಾಸ್ತಾನು ಕೋಣೆಯ ಉದ್ಘಾಟನಾ ಸಮಾರಂಭ ಶಾಲಾ ಮೆನೇಜರ್ ಭಾಸ್ಕರನ್ ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪೈವಳಿಕೆ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಲಕ್ಷ್ಮಿ ಪಾಕಶಾಲೆಯನ್ನು ಉದ್ಘಾಟಸಿ ಶುಭಹಾರೈಸಿದರು. ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಪ್ರಾಥಮಿಕ ಸಾರ್ವಜನಿಕ ಶಾಲೆಗಳ ಕಾರ್ಯವೈಖರಿ, ಸಾರ್ವಜನಿಕ ಶಿಕ್ಷಣಕ್ಕೆ ಸರ್ಕಾರ ನೀಡುವ ಮಹತ್ವವನ್ನು ಸಭೆಗೆ ತಿಳಿಯಪಡಿಸಿದರು. ಉಪಜಿಲ್ಲಾ ಪ್ರಭಾರಿ ವಿದ್ಯಾಧಿಕಾರಿ ಜಿತೇಂದ್ರ ಎಸ್ ಎಚ್ ಮಾತನಾÀಡಿದರು. ಹಳೆ ವಿದ್ಯಾ ರ್ಥಿ ಸಂಘದ ಅಧ್ಯಕ್ಷ, ಪೈವಳಿಕೆ ಪಂ ಚಾಯತ್ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಝೆಡ್ ಎ ಕಯ್ಯಾರï, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಫಾತಿಮತ್ ಜುಹರ ಮತ್ತು ಸಾಮಾಜಿಕ ಕಾರ್ಯಕರ್ತ ವಿ ರವೀಂದ್ರನ್, ಟ್ರಸ್ಟ್ ಉಪಾಧ್ಯಕ್ಷ ಅಶೋಕ್ ಬಾಡೂರ್ ಶುಭಹಾರೈಸಿ ದರು. ಪಿ ಟಿ ಎ ಅಧ್ಯಕ್ಷ ದೀಪಕ್ ಶರ್ಮಾ, ಎಂ ಪಿ ಟಿ ಎ ಅಧ್ಯಕ್ಷೆ ಕವಿತ ಉಪಸ್ಥಿತರಿದ್ದರು. 2022-23ನೇ ಶೈಕ್ಷಣಿಕ ವರ್ಷ ದಲ್ಲಿ ಸ್ಕಾಲರ್ ಶಿಪ್ ಪರೀಕ್ಷೆ ವಿಜೇತೆ ಮೋಕ್ಷಿತಳನ್ನು ಅಭಿನಂದಿ ಸಲಾಯಿತು. ಮುಖ್ಯೋ ಪಾಧ್ಯಾಯಿನಿ ಪ್ರೇಮಲತ ಸಿ ಪಿ ಸ್ವಾಗತಿಸಿ ಟ್ರಸ್ಟ್ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ವಂದಿಸಿದರು, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುರೇಶ ಶೆಟ್ಟಿ ಜೊಡುಕಲ್ಲು ನಿರೂಪಿ ಸಿದರು. ಉದ್ಘಾಟನಾ ಸಮಾರಂಭ ಆರಂ ಭದಲ್ಲಿ ಶಾಲಾ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆ ಯಿತು. ಹಳೆ ವಿದ್ಯಾರ್ಥಿಗಳಿಂದ ಮತ್ತು ಶಾಲಾ ಹಿತೈಷಿಗಳಿಂದ ಮನೋ ರಂಜನಾ ಕಾರ್ಯಕ್ರಮ ನಡೆಯಿತು.