ಕಯ್ಯಾರು ಶಾಲೆಯ ಸ್ಮಾರ್ಟ್ ತರಗತಿ ಉದ್ಘಾಟನೆ
ಜೋಡುಕಲ್ಲು: ಪೈವಳಿಕೆ ಪಂಚಾ ಯತ್ ವ್ಯಾಪ್ತಿಯ ಕಯ್ಯಾರು ಶ್ರೀ ರಾಮಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ಎಡಕ್ಕಾನ ಶಾಂಭವಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊಡುಗೆ ಯಾಗಿ ಸಜ್ಜೀಕರಿಸಲ್ಪಟ್ಟ ಕಂಪ್ಯೂಟರ್ ಲ್ಯಾಬ್‌ನ ಉದ್ಘಾಟನೆಯನ್ನು ಉದ್ಯಮಿ ಶಾಂಭವಿ ಫ್ಯಾಮಿಲಿ ಟ್ರಸ್ಟ್‌ನ ಸಂಚಾಲಕ ಇ.ಎಸ್. ಮಹಾಬಲೇಶ್ವರ ಭಟ್ ನೆರ ವೇರಿಸಿದರು. ಶ್ರೀ ರಾಮಕೃಷ್ಣ ಚಾರಿಟೇ ಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಶಾಲಾ ಪ್ರಬಂಧಕರಾದ ಪಿ. ಭಾಸ್ಕರನ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಊರಿನ ಜನರು ತಮ್ಮ ಮಕ್ಕಳನ್ನು ತಮ್ಮ ಊರಿನ ಶಾಲೆಗೆ ಕಳುಹಿಸುವಂತೆ ಮನವಿ ಮಾಡಿದರು. ಅಲ್ಲದೆ ಹಿಂದೂ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದ ಮಹನೀಯರು ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರು ಎಂದು ನೆನಪಿಸಿದರು. ಪೈವಳಿಕೆ ಪಂ. ಅಧ್ಯಕ್ಷೆ ಜಯಂತಿ, ಸ್ಥಾಯಿ ಸಮಿತಿ ಅಧ್ಯಕ್ಷ ಝಡ್.ಎ. ಕಯ್ಯಾರು, ಇಂಜಿನಿಯರ್ ಭರತ್‌ರಾಜ್ ಆಚಾರ್ ಮಾಯಿಪ್ಪಾಡಿ ಡಯಟ್‌ನ ಮಧುಸೂದನನ್, ಬ್ಲೋಕ್ ಪ್ರೊಜೆಕ್ಟ್ ಕೋ-ಆರ್ಡಿನೇಟರ್ ಜೋಯ್ ಜಿ, ನಿವೃತ್ತ ಮುಖ್ಯೋಪಾಧ್ಯಾಯ ರಾಜ್‌ಗೋಪಾಲ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ದೀಪಕ್ ಶರ್ಮ, ಮಾತೃ ಮಂಡಳಿ ಅಧ್ಯಕ್ಷೆ ನವ್ಯ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರತ್ನಾಕರ ಅರಿಯಾಳ, ಮುಖ್ಯೋಪಾಧ್ಯಾಯಿನಿ ಪ್ರೇಮಲತ ಮೊದಲಾದವರು ಮಾತನಾಡಿದರು. ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಬಹುಮಾನ ವಿಜೇ ತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಪ್ಪ ಶೆಟ್ಟಿ ನಿರೂಪಿಸಿ, ವಂದಿಸಿದರು. ಉಪಾಧ್ಯಕ್ಷ ಅಶೋಕ ಬಾಡೂರು ಸ್ವಾಗತಿಸಿದರು.