ಕಯ್ಯಾರ್ ಇಗರ್ಜಿಯ ವಾರ್ಷಿಕ ಹಬ್ಬ, ನೂತನ ಇಗರ್ಜಿ ಯೋಜನೆಗೆ ಚಾಲನೆ
ಪೈವಳಿಕೆ: ಕಯ್ಯಾರ್ ಕ್ರಿಸ್ತರಾಜ ದೇವಾಲಯದ ವಾರ್ಷಿಕ ಹಬ್ಬ ಹಾಗೂ ನೂತನ ಇಗರ್ಜಿಯ ಯೋ ಜನೆಗೆ ನಿನ್ನೆ ಚಾಲನೆ ನೀಡಲಾಯಿತು. ವಾರ್ಷಿಕ ಹಬ್ಬದಂಗವಾಗಿ ಇಗರ್ಜಿ ಮೈದಾನದಲ್ಲಿ ದಿವ್ಯ ಬಲಿಪೂಜೆ ನಡೆಯಿತು. ಮಂಗಳೂರು ಧರ್ಮ ಪ್ರಾಂತ್ಯದ ಜನರಲ್ ವಂ| ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ದಿವ್ಯ ಬಲಿಪೂಜೆಯ ನೇತೃತ್ವ ನೀಡಿದರು. ಕಯ್ಯಾರ್ ಇಗರ್ಜಿಯ ಧರ್ಮಗುರು ವಂ| ಫಾ| ವಿಶಾಲ್ ಮೊನಿಸ್ ಹಾಗೂ ಪೆರ್ಮುದೆ ಇಗರ್ಜಿಯ ವಂ| ಫಾ| ಕ್ಲೋಡ್ ಕೋರ್ಡ ಉಪಸ್ಥಿತರಿದ್ದರು . ದಿವ್ಯ ಬಲಿಪೂಜೆ ಬಳಿಕ ಪರಮ ಪ್ರಸಾದದ ಮೆರವಣಿಗೆ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮ ದಲ್ಲಿ ಕಯ್ಯಾರ್ ನೂತನ ಇಗರ್ಜಿ ಯೋಜನೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಜೆ. ಆರ್. ಲೋಬೊ, ಉದ್ಯಮಿ ಪೆರ್ಮುದೆಯ ನವೀನ್ ರಂಜಿತ್ ಡಿಸೋಜ , ಫಾದರ್ ವಿಶಾಲ್ ಮೊನಿಸ್ , ವಿಜಯ ಜೇಸುರಾಜ್ ಕಾನ್ವೆಂಟಿನ ಸುಪೀರಿ ಯರ್ ಸಿಸ್ಟರ್ ಜಾಸ್ಮಿನ್ ಲೂವಿಸ್,
ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ ಸೋಜ , ಕಾರ್ಯದರ್ಶಿ ಝೀನಾ ಡಿ ಸೋಜ, ಆಶಿಕಾ ಡಿ ಸೋಜಾ ಉಪಸ್ಥಿತರಿದ್ದರು.
ಕೆಥೋಲಿಕ್ ಸಭಾ ವತಿಯಿಂದ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊನ್ಸಿಂಜೊರ್ ಮ್ಯಾಕ್ಸಿಮ್ ನೊರೊನ್ಹಾ ಬಹುಮಾನ ವಿತರಿಸಿದರು. ಫಾದರ್ ವಿಶಾಲ್ ಮೋನಿಸ್ ಸ್ವಾಗತಿಸಿ, ರೋಶನ್ ಡಿ ಸೋಜ ವಂದಿಸಿದರು. ಜೋಸ್ಟಲ್ ಡಿಸೋಜ ನಿರೂಪಿಸಿದರು.