ಕಯ್ಯಾರ್ ಕ್ರಿಸ್ತರಾಜ ದೇವಾಲಯದಲ್ಲಿ ಗರಿಗಳ ಭಾನುವಾರ ಆಚರಣೆ
ಕಾಸರಗೋಡು: ಕ್ರೈಸ್ತ ಬಾಂಧ ವರು ಪವಿತ್ರವಾದ ವಾರ ಎಂದು ಕರೆಯಲ್ಪಡುವ ಪವಿತ್ರ ಸಪ್ತಾಹ ಗರಿಗಳ ಭಾನುವಾರ ಆಚರಣೆಯೊಂ ದಿಗೆ ಆರಂಭಗೊಂ ಡಿತು. ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಆಶೀರ್ವಚನ ಮತ್ತು ದಿವ್ಯ ಬಲಿ ಪೂಜೆಯನ್ನು ಧರ್ಮಗುರು ಫಾದರ್ ವಿಶಾಲ್ ಮೊನಿಸ್ ನೆರವೇರಿಸಿದರು. ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೈಸ್ತರ ಪವಿತ್ರ ಸಪ್ತಾಹ ಆರಂಭ ಗೊಳ್ಳುತ್ತದೆ. ಯೇಸು ಕ್ರಿಸ್ತರು ಜೆರುಸಲೇಂ ನಗರ ಪ್ರವೇಶಿಸಿದಾಗ ಅಲ್ಲ್ಲಿನ ಭಕ್ತರು ಒಲಿವ್ ಮರದ ಗರಿಗಳನ್ನು ಹಿಡಿದು ವೈಭವದಿಂದ ಸ್ವಾಗತಿಸಿದ ಸಂಕೇತ ವಾಗಿ ತೆಂಗಿನ ಗರಿಗಳನ್ನು ಹಿಡಿದು ಕ್ರೈಸ್ತರು ಬಲಿಪೂಜೆಯಲ್ಲಿ ಪಾಲ್ಗೊಂಡರು.