ಕರಿವೇಡಗಂನಲ್ಲಿ ಸ್ಫೋಟ: ಮನೆ ಮಾಲಕನಿಗೆ ಗಂಭೀರ ಗಾಯ
ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕರಿವೇಡಗಂ ಬಂಡಂಗೈ ಎಂಬಲ್ಲಿ ಭಾರೀ ಸ್ಫೋಟ ನಡೆದಿದೆ. ಮನೆಯೊಳಗೆ ಪಟಾಕಿ ಸಿಡಿದು ಓರ್ವ ಗಂಭೀರ ಗಾಯಗೊಂ ಡಿದ್ದಾನೆ. ಮೋಹನನ್ (40) ಎಂಬವರು ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ರಾತ್ರಿ 9.30ರ ವೇಳೆ ಘಟನೆ ನಡೆದಿದೆ. ಮನೆಯಲ್ಲಿ ನಿರ್ಲಕ್ಷ್ಯ ವಾಗಿ ಪಟಾಕಿ ಸಿಡಿಸಿದಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆಯ ಬಗ್ಗೆ ಬೇಡಗ ಪೊಲೀಸರು ಮೋಹನನ್ ವಿರುದ್ಧ ಸ್ವಯಂ ಕೇಸು ದಾಖಲಿ ಸಿಕೊಂಡಿದ್ದಾರೆ. ವಿಷಯ ತಿಳಿದು ಇನ್ಸ್‌ಪೆಕ್ಟರ್ ರಂಜಿತ್ ರವೀಂದ್ರನ್ ಹಾಗೂ ತಂಡ ಮೋಹನನ್‌ರ ಮನೆಗೆ ತಲುಪಿ ಪರಿಶೀಲನೆ ನಡೆಸಿದೆ. ಸ್ಫೋಟದ ಆಘಾತದಿಂದ ಮನೆಯ ಕಿಟಿಕಿ ಬಾಗಿಲುಗಳು ಉರಿದು ನಾಶಗೊಂಡಿವೆ.