ಕರ್ನಾಟಕ ಮದ್ಯ ವಶ
ಉಪ್ಪಳ: ಉಪ್ಪಳದಲ್ಲಿ ಕುಂಬಳೆ ಅಬಕಾರಿ ರೇಂಜ್ ಕಚೇರಿಯ ಪ್ರಿವೆಂಟೀವ್ ಇನ್‌ಸ್ಪೆಕ್ಟರ್ ಕೆ. ಸುರೇಶ್‌ಬಾಬುರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೯೦ ಎಂಎಲ್‌ನ ೭೭ ಟೆಟ್ರಾ ಪ್ಯಾಕೆಟ್ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಪೈವಳಿಕೆ ಬಾಯಿಕಟ್ಟೆಯ ಅರುಣ್ ಕುಮಾರ್ ಜೆ.ಕೆ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಲು ಸಾಗಿ ಸಲು ಬಳಸಲಾದ ಸ್ಕೂಟರ್‌ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿ ದ್ದಾರೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಐ.ಜಿ ಪ್ರಿವೆಂ ಟೀವ್ ಆಫೀಸರ್ ಶ್ರೀನಿವಾಸ ಪತ್ತಿಲ್, ಸಿಇಒಗಳಾದ ರಮೇಶನ್ ಆರ್, ಜಿತಿನ್ ಪಿ.ಬಿ, ಅಖಿಲೇಶ್ ಎಂ.ಎ ಎಂಬವರು ಒಳಗೊಂಡಿದ್ದರು.