ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಕಾಸರಗೋಡು: ಅಬಕಾರಿ ತಂಡ ಕಾಸರಗೋಡು ಶಾಂತಿನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 11.16 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಶಾಂತಿನಗರದ ಸುರಾಜ್ ಎಸ್ (42) ಎಂಬಾತ ನನ್ನು ಬಂಧಿಸಿ ಪ್ರಕರಣ ದಾಖಲಿಸ ಲಾಗಿದೆ.ಕಾಸರಗೋಡು ಎಕ್ಸೈಸ್ ಇನ್ಸ್ಪೆಕ್ಟರ್ ಅರುಣ್ ನೇತೃತ್ವದಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಜೋಸೆಫ್ ಜೆ, ಕಾಸರಗೋಡು ರೇಂಜ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಜನಾರ್ದ ನನ್ ಕೆ.ಪಿ, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಪ್ರಸಾದ್ ಎಂ.ಎ, ಸಿಇಒ ಗಳಾದ ಚಾರ್ಲ್ಸ್ ಜೋಸ್, ಫಸೀಲಾ ಡಿ ಎಂಬವರು ಒಳಗೊಂಡಿದ್ದಾರೆ.