ಕರ್ಷಕಶ್ರೀ ಮಿಲ್ಕ್ ಓಣಂ- ಈದ್‌ಮಿಲಾದ್ ಬಹುಮಾನ ಯೋಜನೆ ಡ್ರಾ, ವ್ಯಾಪಾರಿಗಳಿಗೆ ಗೌರವಾರ್ಪಣೆ
ಕಾಸರಗೋಡು: ಕರ್ಷಕಶ್ರೀ ಮಿಲ್ಕ್ ಓಣಂ-ಈದ್ ಮಿಲಾದ್ ನಂಗವಾಗಿ ನಡೆಸಿದ ಬಹುಮಾನ ಯೋಜನೆಯ ಡ್ರಾ ಹಾಗೂ ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್ ವ್ಯಾಪಾರಿಗಳಿಗಿರುವ ಕರ್ಷಕಶ್ರೀಯ ಗೌರವ ಸಮರ್ಪಣೆ ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಿತು. ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸಿ ಮಾತನಾಡಿ, 15 ವರ್ಷದಿಂದ ಒಂದು ಉತ್ಪನ್ನ ಮಾರುಕಟ್ಟೆಯಲ್ಲಿ ಸಾಧನೆ ಮಾಡಬೇಕಿ ದ್ದರೆ ಅದು ಉತ್ತಮವಾಗಿದ್ದು, ರಾಸಾ ಯನಿಕ ಉಪಯೋಗಿಸದೆ ಸಿದ್ಧಪಡಿ ಸಿರುವುದಾಗಿರಬೇಕೆಂದು ಅಭಿಪ್ರಾಯ ಪಟ್ಟರು. ಕರ್ಷಕಶ್ರೀಯ ಡೈರೆಕ್ಟರ್ ಇ. ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ ಅತಿಥಿಯಾಗಿ ಭಾಗವಹಿಸಿದರು. ಸಿನಿಮಾ ನಟಿ ಪ್ರಿಯಾಂಕ ಶ್ರೀಲಕ್ಷ್ಮಿ ಉಪಸ್ಥಿತರಿದ್ದು, ಜಿಲ್ಲೆಯ ವಿವಿಧ ಪ್ರದೇಶಗಳ ೩೦೦ರಷ್ಟು ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್ ವ್ಯಾಪಾರಿಗಳಿಗಿರುವ ಬಹುಮಾನವನ್ನು ವಿತರಿಸಿದರು.
ರಂಗನಾಥ ಶೆಣೈ, ಎಂ. ಬದ್ರುದ್ದೀನ್ ಮಾತನಾಡಿದರು. ವಿವಿಧ ಕಡೆಗಳ ವ್ಯಾಪಾರಿಗಳು ಭಾಗವಹಿಸಿದರು. ಓಣಂ ಹಬ್ಬಾಚರಣೆಯಂಗವಾಗಿ ೬ ವರ್ಷಕ್ಕಿಂತ ಕೆಳಗಿನ ಗಂಡು ಮಕ್ಕಳಿಗೂ, ಹೆಣ್ಣು ಮಕ್ಕಳಿಗೂ ನಡೆಸಿದ ಫೊಟೋ ಸ್ಪರ್ಧೆಯಲ್ಲಿ ೫೦೦ರಷ್ಟು ಮಂದಿ ಭಾಗ ವಹಿಸಿದ್ದು, ಉತ್ತಮ ಫೊಟೋಗಳಿಗೆ ಬಹುಮಾನ ನೀಡಲಾಗುವುದು.