ಕಲ್ಲಕಟ್ಟ ಎಂಎಯುಪಿ ಶಾಲೆ ವಾರ್ಷಿಕೋತ್ಸವ
ಮಾನ್ಯ: ಕಲ್ಲಕಟ್ಟ ಎಂಎಯುಪಿ ಶಾಲೆಯಲ್ಲಿ ವಾರ್ಷಿಕೋತ್ಸವ ಜರಗಿತು. ಕಾಸರಗೋಡು ಬಿಆರ್ಸಿಯ ಬ್ಲೋಕ್ ಪ್ರೊಜೆಕ್ಟ್ ಆಫೀಸರ್ ಖಾಸಿಂ ಟಿ. ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ಪಿ.ವಿ. ಕೇಶವ ಧ್ವಜಾರೋಹಗೈದರು.
ಚೆಂಗಳ ಪಂಚಾಯತ್ ಸದಸ್ಯ ಬಶೀರ್ ಎನ್.ಎ. ಅಧ್ಯಕ್ಷತೆ ವಹಿಸಿ ದರು. ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಆಗಸ್ಟಿನ್ ಬರ್ನಾಡ್ ಮೊಂತೇರೊ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮುಖ್ಯೋಪಾಧ್ಯಾ ಯಿನಿ ಜಯಲಕ್ಷ್ಮಿ ಸಿ.ಎಚ್. ವರದಿ ವಾಚಿಸಿದರು. ಪಿಟಿಎ ಅಧ್ಯಕ್ಷ ಗೋ ಪಾಲಕೃಷ್ಣ ಎ.ಎನ್, ಮಾತೃಸಂಘದ ಅಧ್ಯಕ್ಷೆ ಪಾರ್ವತಿ ಪಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ| ಶ್ರೀನಾಥ್ ಶುಭ ಹಾರೈಸಿದರು. ಇದೇ ವೇಳೆ ನಿವೃತ್ತಿ ಹೊಂದಲಿರುವ ಅಧ್ಯಾಪಕ ಹರಿಕೃಷ್ಣ ಭಟ್ರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಕಳಿಂದ ಕಲಾ ಕಾರ್ಯಕ್ರಮ ಜರಗಿತು.