ಕಳತ್ತೂರು ಜಾರಂ ಮಖಾಂ ಉರೂಸ್ ನಾಳೆಯಿಂದ
ಕುಂಬಳೆ: ಕಳತ್ತೂರು ಜಾರಂ ಮಖಾಂ ಉರೂಸ್ ನಾಳೆಯಿಂದ 29ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದೆಂದು ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ನಾಳೆ ಜುಮಾ ನಮಾಜಿನ ಬಳಿಕ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಸಿಯಾರತ್‌ಗೆ ನೇತೃತ್ವ ನೀಡುವರು. ಉರೂಸ್ ಸಮಿತಿ ಅಧ್ಯಕ್ಷ ಧ್ವಜಾರೋಹಣಗೈಯ್ಯುವರು. ರಾತ್ರಿ 7 ಗಂಟೆಗೆ ನಡೆಯುವ ಸಮ್ಮೇಳನವನ್ನು ಸಮಸ್ತ ಕೇರಳ ಜಂಇಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿ ಯಾರ್ ಉದ್ಘಾಟಿಸು ವರು. ಎನ್.ಪಿ.ಎಂ. ಶರಾಫುದ್ದೀನ್ ತಂಙಳ್ ಹಾದಿ ದಾರಿಮಿ ರಬ್ಬಾನಿ ಕುನ್ನುಂಗೈ ಅಧ್ಯಕ್ಷತೆ ವಹಿಸುವರು. ಪಾಣಕ್ಕಾಡ್ ಹಮೀದಲಿ ಶಿಯಾಬ್ ತಂಙಳ್ ಮುಖ್ಯ ಅತಿಥಿಯಾಗಿರುವರು. ಅಸ್ಲಂ ಅಸ್ಹರಿ ಪೊಯ್ತುಂಕಡವ್ ಪ್ರಧಾನ ಭಾಷಣ ಮಾಡುವರು. ಜಮಾಯತ್ ಅಧ್ಯಕ್ಷ ಅಬ್ದುಲ್ ರಹಮಾನ್, ಇಬ್ರಾಹಿಂ ಖಲೀಲ್ ಫೈಸಿ, ಮಹಮ್ಮೂದ್ ಸಾದಿ, ಅಬೂಬಕ್ಕರ್ ದಾರಿಮಿ, ಅಲವಿ ಬಾಕವಿ, ಅಬ್ದುಲ್ ರಶೀದ್ ಸಖಾಫಿ, ಅಬ್ದುಲ್ ರಹ್ಮಾನ್ ಖತ್ತರ್, ಅಲಿ ಬನಾರಿ ಭಾಗವಹಿಸುವರು. ಶನಿವಾರ ರಾತ್ರಿ ಮಜ್ಲಿಸುನ್ನೀರ್‌ಗೆ ಎನ್.ಪಿ.ಎಂ. ಶರಾಫುದ್ದೀನ್ ತಂಙಳ್ ನೇತೃತ್ವ ನೀಡುವರು. ಸಿರಾಜುದ್ದೀನ್ ಫೈಸಿ ಚೇರಾಲ್ ಉದ್ಘಾಟಿಸುವರು.
ಕಬೀರ್ ಫೈಸಿ ಪೆರಿಂಗಡಿ ಪ್ರಧಾನ ಭಾಷಣ ಮಾಡುವರು. ಆದಿತ್ಯವಾರ ಮುನೀರ್ ಹುದವಿ, ಸೋಮವಾರ ಅಬ್ದುಲ್ ರಜಾಕ್ ಅಬ್ರಾರಿ ಪತ್ತನಂತಿಟ್ಟ, ಮಂಗಳವಾರ ರಾತ್ರಿ ಉಮೈರ್ ದಾರಿಮಿ ವೆಳ್ಳಾಯಿಕ್ಕೋಡ್, ಬುಧವಾರ ಆಶಿಕ್ ದಾರಿಮಿ ಆಲಪ್ಪುಳ ಧಾರ್ಮಿಕ ಪ್ರವಚನ ನೀಡುವರು. ವಿವಿಧ ದಿನಗಳಲ್ಲಿ ಹಲವು ಮಂದಿ ಗಣ್ಯರು ಭಾಗವಹಿಸುವರು. ಶನಿವಾರ ಸಮಾರೋಪ ಸಮಾರಂಭ ಜರಗಲಿದ್ದು, ಸಮಸ್ತ ಕೇರಳ ಜಂಇಯತ್ತುಲ್ ಉಲಮ ಅಧ್ಯಕ್ಷ ಸಯ್ಯೀದುಲ್ ಉಲಮ ಸಯ್ಯೀದ್ ಮೊಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸುವರು. ಬಿ.ಕೆ. ಅಬ್ದುಲ್ ಖಾದರ್ ಅಲ್‌ಖಾಸಿಮಿ ಅಧ್ಯಕ್ಷತೆ ವಹಿಸುವರು. ಮಹಮ್ಮೂನ್ ಹುದವಿ ಪ್ರಧಾನ ಭಾಷಣ ಮಾಡುವರು. ಶಾಸಕ ಎಕೆಎಂ ಅಶ್ರಫ್ ಸಹಿತ ಹಲವರು ಭಾಗವಹಿಸುವರು.
ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಮೌಲೀದ್ ಮಜ್ಲಿಸ್‌ಗೆ ಕೆ.ಎಸ್. ಅಲಿತಂಙಳ್ ಕುಂಬೋಳ್ ನೇತೃತ್ವ ನೀಡುವರು. ಈ ಬಗ್ಗೆ ನಡೆದ ಸುದ್ಧಿಗೋಷ್ಠಿಯಲ್ಲಿ ಪಿ.ಎಚ್. ಅಸ್ಹರಿ ಕಳತ್ತೂರು, ಅಬ್ದುಲ್ ರಹ್ಮಾನ್ ಮಡಪ್ಪಾಡಿ, ಅಬ್ದುಲ್ ರಹ್ಮಾನ್ ಖತ್ತರ್, ಅಲಿ ಬನಾರಿ, ಅಸೀಸ್ ಸುಲ್ತಾನ್, ಅಸೀಸ್ ಅಬಹಾ, ಹಕೀಂ ಪಾಚಾನಿ ಭಾಗವಹಿಸಿದರು.